ಸಮಾನತೆಯ ಪರಿಕಲ್ಪನೆ ಬಿತ್ತಿದ ಮಹಾತ್ಮರು

5Savadatti2
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.3537037, 0.39516684);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;
Published on

ಸವದತ್ತಿ: ಡಾ. ಬಾಬು ಜಗಜೀವನರಾಂ ದೇಶಕಂಡ ಅಪ್ರತಿಮ ನಾಯಕ. ಅವರ ಸಾಮಾಜಿಕ ಕಳಕಳಿ ಹಾಗೂ ರಾಜಕೀಯ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಅವರ ಸಹೋದರ ಅಶ್ವತ್ಥ ವೈದ್ಯ ಹೇಳಿದರು.

ಇಲ್ಲಿನ ಗುರುಭವನದಲ್ಲಿ ಶನಿವಾರ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಡಾ. ಬಾಬು ಜಗಜೀವನರಾಂ ಅವರು ಪ್ರಥಮ ಕ್ಯಾಬಿನೆಟ್ ಸದಸ್ಯರಾಗಿ ಬ್ರಿಟಿಷರ ಆಡಳಿತ ವ್ಯವಸ್ಥೆಯಲ್ಲೇ ಜಾತಿ ವ್ಯವಸ್ಥೆ ವಿರೋಧಿಸಿ ಸಮಾನತೆಯ ಪರಿಕಲ್ಪನೆ ಸಾರಿದ ಮಹಾನ್ ವ್ಯಕ್ತಿ ಎಂದರು. ಶಿಕ್ಷಕ ಎಂ.ಬಿ. ಕಾಳೆ ಉಪನ್ಯಾಸ ನೀಡಿದರು.

ತಾಪಂ ಇಒ ಆನಂದ ಬಡಕುಂದ್ರಿ, ಬಿಇಒ ಮೋಹನ್ ದಂಡಿನ, ಪಿಐ ಧರ್ಮಾಕರ ಧರ್ಮಟ್ಟಿ, ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚಣ್ಣವರ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಎಚ್.ಎ. ಕದ್ರಾಪೂರಕರ, ಎಚ್.ಎಂ. ಮಲ್ಲನಗೌಡರ, ಆರೋಗ್ಯಧಿಕಾರಿ ಶ್ರೀಪಾದ್ ಸಬನೀಸ್, ಸಮಾಜ ಕಲ್ಯಾಣಾಧಿಕಾರಿ ಆರ್.ಆರ್. ಕುಲಕರ್ಣಿ, ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಅಕ್ಷರ ದಾಸೋಹ ಅಧಿಕಾರಿ ಮೈತ್ರಾದೇವಿ ವಸದ, ಸಿಡಿಪಿಒ ಸುನೀತಾ ಪಾಟೀಲ, ಅನೀಲ ಮರಲಿಂಗನವರ, ಬಸವರಾಜ ತಳವಾರ, ಬಸವರಾಜ ಶಿರಸಂಗಿ, ರಾಘವೇಂದ್ರ ಪೂಜಾರ, ನಾಗಪ್ಪ ಬಡೆಪ್ಪನವರ, ಎಂ. ಮಲ್ಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net