

ಬಳ್ಳಾರಿ: ದೇವರ ದಾಸಿಮಯ್ಯ ಅವರ ಆಧ್ಯಾತ್ಮಿಕ ಹಾಗೂ ಮಾನವೀಯ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಿ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಹೇಳಿದರು.
ಇದನ್ನೂ ಓದಿ:ದೇವರ ದಾಸಿಮಯ್ಯ ಜೀವನಕ್ಕೆ ಸ್ಫೂರ್ತಿ
ನಗರದ ಹೊಂಗಿರಣ ಸಾಂಸ್ಕೃತಿಕ ಸಮುಚ್ಛಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದ ಚರಿತ್ರೆಯಲ್ಲಿ ಅನೇಕ ಶರಣರು ಆಧ್ಯಾತ್ಮಿಕ ಚಿಂತನೆಯನ್ನು ವ್ಯಾಪಕಗೊಳಿಸಿದ್ದು, ಕಲ್ಯಾಣದಲ್ಲಿ ಬಸವಣ್ಣನ ಕಾಲಘಟ್ಟದಲ್ಲಿ ಸಮಾಜದ ಏಳಿಗೆ, ಸಮಾನತೆ, ಕಾಯಕ ದಾಸೋಹ, ಮಾನವೀಯ ಮೌಲ್ಯಗಳನ್ನು ರೂಪಿಸಿದ ಕಾಲವಾಗಿತ್ತು. ಹಿಂದೆ ಸಮಾಜದಲ್ಲಿ ಮನೆ ಮಾಡಿದ್ದ ಮೂಢ ನಂಬಿಕೆ ಹಾಗೂ ಜಾತಿ ಸಂಘರ್ಷಗಳಿಂದ ದೂರ ಇರುವಂತೆ ನೇರ ನಿಷ್ಠುರ ನುಡಿಗಳಿಂದ ದೇವರ ದಾಸಿಮಯ್ಯ ತಿಳಿಸಿದ್ದರು ಎಂದು ಹೇಳಿದರು.
ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಸಿ.ದೇವಾನಂದ ಮಾತನಾಡಿ, ಬಡವರಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಸಮುದಾಯದ ಯುವಕರು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದರು.