

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗುರುವಾರ ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಆಚರಿಸಲಾಯಿತು.
ದೂದಪೀರಾಂ ದರ್ಗಾದಿಂದ ಮುಖ್ಯ ಬಜಾರ್ ರಸ್ತೆ, ಶಿಗ್ಲಿ ನಾಕಾ, ಗದಗ ನಾಕಾ, ಮೋಮಿನಗಲ್ಲಿ, ಬಳಿಗಾರ ಓಣಿಯ ಮೂಲಕ ಮಹಮ್ಮದ ಪೈಗಂಬರ ಭಾವಚಿತ್ರ ಮೆರವಣಿಗೆ ಸಾಗಿ ದರ್ಗಾದಲ್ಲಿ ಸಂಪನ್ನಗೊಂಡಿತು.
ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ ಮಾತನಾಡಿ, ‘ಮಹಮ್ಮದ ಪೈಗಂಬರರು ಮಾನವ ಕುಲದ ಒಳಿತಿಗಾಗಿ ಶಾಂತಿ, ಸಮಾನತೆಯ ಸಂದೇಶ ಸಾರಿದ್ದಾರೆ. ಸರಳ, ಸಚ್ಚಾರಿತ್ರ ಮತ್ತು ತ್ಯಾಗಭರಿತ ಬದುಕನ್ನು ನಡೆಸಿ ಮನುಕುಲದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.
ದೂದಪೀರಾಂ ದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನ ಕಣಕೆ, ಡಿ.ಜೆ. ಮುಚ್ಚಾಲೆ, ಎಸ್.ಕೆ. ಹವಾಲ್ದಾರ, ವೀರಕನ್ನಡಿಗ ಟಿಪ್ಪು ಸೇನೆ ಅಧ್ಯಕ್ಷ ಜಾಕೀರಹುಸೇನ್ ಹವಾಲ್ದಾರ, ಅಂಜುಮನ್ ಕಮಿಟಿ ಉಪಾಧ್ಯಕ್ಷ ಅಬ್ದುಲ್‌ಕರೀಂ ಸೂರಣಗಿ, ಮಾಜಿ ಅಧ್ಯಕ್ಷ ಅನ್ವರಸಾಬ ಹವಾಲ್ದಾರ, ಅಬ್ದುಲ್‌ಕರೀಂ ಕರೀಂಖಾನವರ, ಮುಸ್ತಾಕ್‌ಅಹ್ಮದ ಶಿರಹಟ್ಟಿ, ಎನ್.ಎಂ. ಗದಗ, ಫಿರ್ದೋಶ ಆಡೂರ, ಸಿಕಂದರ ಕಣಕೆ, ರಾಮಣ್ಣ ಗಡದವರ, ವಿಜಯ ಕರಡಿ, ದಾದಾಪೀರ ತಂಬಾಕದ ಇತರರಿದ್ದರು.