

ನರಗುಂದ: ಬಸವಣ್ಣನವರು ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ. 12ನೇ ಶತಮಾನದಲ್ಲಿ ಕ್ರಾಂತಿ ಪುರುಷರಾಗಿ ಕಾಯಕಯೋಗಿಗಳಾಗಿ ಅನೇಕ ವಚನಗಳನ್ನು ಬರೆದು ನಾಡಿನ ಜನತೆಯಲ್ಲಿ ಸಮಾನತೆಯ ಆದರ್ಶಗಳನ್ನು ಭಿತ್ತಿದರು ಎಂದು ನಿವೃತ್ತ ಉಪನ್ಯಾಸಕ ಎಚ್.ಎ. ಮುದಿಯಪ್ಪನವರ ತಿಳಿಸಿದರು.
ನರಗುಂದ ಬಸವೇಶ್ವರ ಸಮುದಾಯ ಭವನದಲ್ಲಿ ಬಸವ ಕೇಂದ್ರ ಹಾಗೂ ಮುರುಘರಾಜೇಂದ್ರ ಫ್ರೀ ಭೋರ್ಡಿಂಗ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ 13ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಸವಣ್ಣನವರು ಲಿಂಗ ತಾರತಮ್ಯ ಮೂಢ ನಂಬಿಕೆಗಳನ್ನು ನಿರಾಕರಿಸಿದ್ದರು. ಇಷ್ಟಲಿಂಗ ಹಾರವನ್ನು ಪರಿಚಯಿಸಿದವರು ಬಸವಣ್ಣನವರು. ಎಲ್ಲರಿಗೂ ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ವಿಷಯಗಳನ್ನು ಚರ್ಚಿಸಲು ಮುಕ್ತ ಅವಕಾಶ ಕಲ್ಪಿಸಿದರು. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ ಎಂದು ಹೇಳಿದರು,
ಎಸ್.ಎಚ್. ಪಾಟೀಲ, ಬಸವರಾಜ ಕ್ಯಾರಕೊಪ್ಪ, ಚನ್ನು ನಂದಿ, ಎಸ್.ಜಿ. ಜಕ್ಕಲಿ, ಶಂಕ್ರಣ್ಣ ವಾಳದ, ಸೀಮಣ್ಣ ಗೊವೇಶ್ವರ, ವಿ.ಎನ್. ಕೊಳ್ಳಿಯವರ, ಸಿ.ಎಚ್. ಕೋರಿ, ಕಲಾಶ್ರೀ ಹಾದಿಮನಿ, ಎಸ್.ವಿ. ಹಗಡಾಳ, ಜೆ.ಆರ್. ಕದಂ, ಎಸ್.ಬಿ. ಭಜಂತ್ರಿ, ಟಿ.ಆರ್. ಉಳ್ಳೇಗಡ್ಡಿ, ಪತ್ರೆಪ್ಪ ಹಡಪದ, ಬಿ.ಎಂ. ಅಳಗವಾಡಿ, ಎಸ್.ವೈ. ಹುಂಬಿ, ಮನೋಹರ ಹುಯಿಲಗೋಳ, ಆರ್.ಜಿ. ಸುಂಕದ, ಮೋಹನ ಉಪಾಸಿ, ಸವಿತಾ ನಂದಿ, ಸುನಂದಾ ನಂದಿ, ದಾಕ್ಷಾಯಿಣಿ ನಂದಿ ಇತರರಿದ್ದರು. ಎಸ್.ಬಿ. ಭಜಂತ್ರಿ, ಟಿ.ಆರ್. ಉಳ್ಳೇಗಡ್ಡಿ, ಬಸವರಾಜ ಕ್ಯಾರಕೊಪ್ಪ ನಿರ್ವಹಿಸಿದರು.