ರಾಜಕಾರಣ ಎಂದಿಗೂ, ಯಾರಿಗೂ ಶಾಶ್ವತವಲ್ಲ

mkg1a
Published on

ಹೊನ್ನಾಳಿ: ರಾಜಕಾರಣ ಯಾವತ್ತು ಯಾರಿಗೂ ಶಾಶ್ವತವಲ್ಲ. ನಾವು ಮಾಡಿದ ಕೆಲಸಗಳು ಮಾತ್ರ ಶಾಶ್ವತ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಚೀಲೂರು ಗ್ರಾಮದ ಅಕ್ಕನ ಬಳಗ ಸಮುದಾಯ ಭವನದಲ್ಲಿ ಕೇಂದ್ರ ಸರ್ಕಾರದ 9ನೇ ವರ್ಷದ ಸಾಧನೆ ಮತ್ತು ಮಹಾ ಸಂಪರ್ಕ ಅಭಿಯಾನದಲ್ಲಿ ಬೂತ್‌ಮಟ್ಟದ ಕಿಟ್ ವಿತರಿಸಿ ಅವರು ಮಾತನಾಡಿದರು.

ಜಿಪಂ, ತಾಪಂ ಚುನಾವಣೆ ಯಾವುದೇ ಸಂದರ್ಭದಲ್ಲಿ ಬರಬಹುದು. ಅದನ್ನು ಎದುರಿಸಲು ನಾವು ಸನ್ನದ್ದಾಗಿರಬೇಕು. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ನಮ್ಮದು ದೊಡ್ಡ ಕಾರ್ಯಕರ್ತರ ಪಡೆಯಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಕಷ್ಟು ಜನಪರ ಯೋಜನೆ ಜಾರಿ ಮಾಡಿದ್ದು, ನಾವು ಅವುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕೆಂದರು.

ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್ ಮಾತನಾಡಿದರು, ಮುಖಂಡರಾದ ದೊಡ್ಡೇರಿ ರಾಜಪ್ಪ, ಕುಬೇರಪ್ಪ, ಅಜಯ್, ಮಲ್ಲೇಶ್, ಕರಿಬಸಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net