

ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದ ರುದ್ರಮುನೀಶ್ವರ ಮಠದ ಲಿಂ.ರುದ್ರಮುನೀಶ್ವರ ಸ್ವಾಮಿಗಳು ಮಹಾ ತಪಸ್ವಿಗಳಾಗಿದ್ದರು. ಶ್ರೀಮಠಕ್ಕೆ ಬರುವ ಭಕ್ತರ ಆರಾಧ್ಯದೈವವಾಗಿದ್ದರು ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಲೂಕಿನ ಚೀಕಲಪರ್ವಿ ಗ್ರಾಮದ ರುದ್ರಮುನೀಶ್ವರ ಮಠಕ್ಕೆ ಮಂಗಳವಾರ ಭೇಟಿ ನೀಡಿದ ಶ್ರೀಗಳು, ರುದ್ರಮುನೀಶ್ವರ ಸ್ವಾಮಿಗಳ ಕರ್ತೃಗದುಗೆಯ ದರ್ಶನ ಪಡೆದು ನಂತರ ಮಾತನಾಡಿದರು. ಲಿಂ.ವಿರೂಪಾಕ್ಷ ಸ್ವಾಮಿಗಳು ಹುಬ್ಬಳ್ಳಿಯ ಮೂರು ಸಾವಿರ ಮಠದ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು.
ಹೀಗಾಗಿ ಈ ಭಾಗಕ್ಕೆ ಬಂದಾಗ ಶ್ರೀಮಠಕ್ಕೆ ಭೇಟಿ ನೀಡಿ ಹೋಗುತ್ತೇವೆ ಎಂದರು. ಶ್ರೀಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಮಾ.24 ರಂದು ವಿರೂಪಾಕ್ಷ ಸ್ವಾಮಿಗಳ 11ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶ್ರೀಗಳ ಕರ್ತೃಗದ್ದುಗೆಗೆ ರುದ್ರಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ತಿಳಿಸಿದರು.