

ಹಗರಿಬೊಮ್ಮನಹಳ್ಳಿ: ದೇಗುಲ ನಿರ್ಮಾಣಕ್ಕೆ 40 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಉಲುವತ್ತಿಯಲ್ಲಿ ಶ್ರೀ ಬಸವಲಿಂಗೇಶ್ವರ ದೇವಾಲಯ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರದ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಶಾಸಕರು ದೇಗುಲ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಹಳೇ ದೇವಸ್ಥಾನ ನಿವೇಶನದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಶಿಲ್ಪಿ ಮಂಜುನಾಥ ಸುಂದರ ದೇಗುಲ ನಿರ್ಮಿಸಲಿದ್ದಾರೆ. ಕ್ಷೇತ್ರದಲ್ಲಿ ಅನೇಕ ದೇಗುಲ ನಿರ್ಮಾಣಕ್ಕೆ ಶಾಸಕರು 10 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದರು.
ದೇವಸ್ಥಾನ ನಿರ್ಮಾಣಕ್ಕೆ ಎರಡು ಲಕ್ಷ ರೂ. ನೀಡಿದ ಗ್ರಾಮದ ಆಲೂರು ಮಾದೇವಮ್ಮ ಹಾಗೂ 50 ಸಾವಿರ ರೂ. ನೀಡಿದ ಕೆ.ವೆಂಕಟೇಶ ಅವರನ್ನು ಸನ್ಮಾನಿಸಲಾಯಿತು. ದೇಗುಲ ಸಮಿತಿ ಅಧ್ಯಕ್ಷ ಆರ್.ಶಿವಕುಮಾರ ಗೌಡ, ಗೌರವಾಧ್ಯಕ್ಷ ಜೆ.ಎಂ.ಸತ್ಯಮೂರ್ತಿ, ಕಾರ್ಯದರ್ಶಿ ಬಡಿಗೇರ್ ಕೊಟ್ರೇಶ, ಖಜಾಂಚಿ ಆಡೂರ್ ಬಸವರಾಜ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ಪುರಸಭೆ ಮಾಜಿ ಸದಸ್ಯ ಬಾದಾಮಿ ಮೃತ್ಯುಂಜಯ, ಪ್ರಮುಖರಾದ ಪಾಂಡು ನಾಯ್ಕ, ಅಗಸರ ಬಸವರಾಜ, ಶರಣಪ್ಪ, ಯು.ಎಸ್.ಕೊಟ್ರೇಶ, ಬಣಕಾರ ರಾಜಪ್ಪ ಇತರರಿದ್ದರು.