ಶ್ರೀ ರಾಘವೇಂದ್ರ ಸ್ವಾಮಿಗಳ ಅದ್ದೂರಿ ರಥೋತ್ಸವ

The grand chariot festival of Sri Raghavendra Swami
Published on

ರಟ್ಟಿಹಳ್ಳಿ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಯ 354ನೇ ಆರಾಧನಾ ಮಹೋತ್ಸವದ ನಿಮಿತ್ತ ಮಂಗಳವಾರ ಭಕ್ತರ ಸಮೂಹದೊಂದಿಗೆ ರಥೋತ್ಸವವು ವೈಭವಯುತವಾಗಿ ಜರುಗಿತು.

ಕಳೆದ 3 ದಿವಸಗಳಿಂದ ಮಠದಲ್ಲಿ ಅರ್ಚಕರಾದ ನರಸಿಂಹಮೂರ್ತಿ ಅದ್ವಾನಿ ನೇತೃತ್ವದಲ್ಲಿ ಬೆಳಗ್ಗೆ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಪ್ರಸಾದ ವಿತರಣೆ, ಸಂಜೆ ವಿದ್ವಾನ್ ಪವನ ಬಡಿಗೇರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ, ಆರತಿ, ಭಜನೆಗಳು, ಪಲ್ಲಕ್ಕಿ ಉತ್ಸವ, ತೊಟ್ಟಿಲು ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು. ಮಂಗಳವಾರ ಬೆಳಗ್ಗೆ ಮಠದ ಆವರಣದಲ್ಲಿ ರಥಕ್ಕೆ ಪೂಜೆ ಸಲ್ಲಿಸಲಾಯಿತು. ರಥೋತ್ಸವವು ಕದಂಬ ನಗರ, ಕಾಳಿಕಾದೇವಿ ದೇವಸ್ಥಾನ, ಹನುಮಂತ ದೇವರ ದೇವಸ್ಥಾನದ ರಸ್ತೆಯಲ್ಲಿ ಸಾಗಿ ಮಠಕ್ಕೆ ಬಂದು ಸಂಪನ್ನಗೊಂಡಿತ್ತು. ರಥೋತ್ಸವ ವೇಳೆ ಭಕ್ತರು ಕಾಯಿ, ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿದರು. ವಾದ್ಯ ಮೇಳದೊಂದಿಗೆ ವೈಭವಯುತವಾಗಿ ರಥೋತ್ಸವವು ಜರುಗಿತು.

ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು. ಆರಾಧನಾ ಮಹೋತ್ಸವ ನಿಮಿತ್ತ ಮಠಕ್ಕೆ ದೀಪಾಲಂಕಾರ ಮಾಡಿದ್ದು ಭಕ್ತರ ಗಮನ ಸೆಳೆಯಿತು.

ಕಮಿಟಿ ಅಧ್ಯಕ್ಷ ಸುಶೀಲ ನಾಡಗೇರ, ವಿಜೇಂದ್ರ ಶಿರೋಳ, ಜಯಣ್ಣ ಅಧ್ಯಾಪಕ, ರಾಘವೇಂದ್ರ ಮನೋಪಂತರ, ಮನೋಜ ಗೋಣೆಪ್ಪನವರ, ಪ್ರಸನ್ನ ಬಿದರಹಳ್ಳಿ, ರಾಘವೇಂದ್ರ ಹಾದಿ, ವಿಶ್ವನಾಥ ಅಧ್ಯಾಪಕ, ರವಿ ಮಕರಿ, ಅನಂತ ಅದ್ವಾನಿ, ಗಿರೀಶ ನಾಡಗೇರ, ಸಂತೋಷ ಕಾಪ್ಸೇಕಾರ, ರಾಜು ವೇರ್ಣಿಕರ, ಸತೀಶ ರಾಯ್ಕರ, ಪ್ರದೀಪ ಕುಲ್ಕರ್ಣಿ, ಬಾಬು ವೇರ್ಣಿಕರ, ಗೋಪಾಲ ಮಡಿವಾಳರ, ಹನುಮಂತ ಪರೀಟ, ಶ್ರೀನಿವಾಸ ಬೈರಪ್ಪನವರ, ರವೀಂದ್ರ ಮುದ್ದಪ್ಪನವರ, ಪರಶುರಾಮ ಜಾಧವ, ಕಿರಣ ಮೂಡಿ, ಪ್ರಭಾವತಿ ಕುಲ್ಕರ್ಣಿ, ಶಕುಂತಲಾ ನಾಡಗೇರ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net