ಅದ್ದೂರಿಯಾಗಿ ಜರುಗಿದ ಶ್ರೀ ಸುಬುಧೇಂದ್ರ ತೀರ್ಥರ ವರ್ಧಂತಿ ಉತ್ಸವ

MANTRALAYA
MANTRALAYA
Published on

ರಾಯಚೂರು ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಪೀಠಾಽಪತಿ ಶ್ರೀ ಸುಬುಧೇಂದ್ರ ತೀರ್ಥರ ೫೪ನೇ ವರ್ಧಂತಿ ಉತ್ಸವ ನಿಮಿತ್ತ ಶ್ರೀಮಠದಲ್ಲಿ ಶುಕ್ರವಾರ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಜರುಗಿದವು.

ಶ್ರೀಗಳು ತುಳಸಿ ವನದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಸಾಮರಸ್ಯದ ಸಂದೇಶವನ್ನು ಮೂಡಿಸಲು ವೃಕ್ಷ ಪ್ರಸಾದವಾಗಿ ಭಕ್ತರಿಗೆ ಸಸಿಗಳನ್ನು ವಿತರಿಸಿ ವಿವಿಧ ದಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ನಂತರ ಶ್ರೀಮಠದಿಂದ ಭಕ್ತದಿಗಳಿಂದ ಆಯೋಜನೆ ಮಾಡಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಭಕ್ತರು, ಮಠದ ಸಿಬ್ಬಂದಿ ಮತ್ತು ಸ್ಥಳೀಯರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net