ಶ್ರೀಗಳ ಅದ್ದೂರಿ ಜನ್ಮೋತ್ಸವ

The grand birthday of Mr
The grand birthday of Mr
Published on

ರಬಕವಿ-ಬನಹಟ್ಟಿ: ಬನಹಟ್ಟಿಯಲ್ಲಿ ಮಲ್ಲಿಕಾರ್ಜುನ ಶಂಕರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮೋತ್ಸವ ಭಾನುವಾರ ಜರುಗಿತು. ಬನಹಟ್ಟಿಯಿಂದ ರಾಮಪುರದ ಭೋಜು ಹೂಗಾರ ಅವರ ತೋಟದವರೆಗೆ ಪಾದಯಾತ್ರೆ ನಡೆಯಿತು.

ಗುರುಗಳ ತೊಟ್ಟಿಲಿನೊಂದಿಗೆ ಪಾದಯಾತ್ರೆ ಪ್ರಾರಂಭಗೊಂಡು ಬನಹಟ್ಟಿಯ ನೀಲಕಂಠೇಶ್ವರ ಮಠ ಹಾಗೂ ರಾಮಪುರದ ನೀಲಕಂಠೇಶ್ವರ ಮಠದಲ್ಲಿ ತೊಟ್ಟಿಲಕ್ಕೆ ಪೂಜೆ ಸಲ್ಲಿಸಲಾಯಿತು.

ಮಹಾಲಿಂಗಪುರದ ಮಹಾಲಿಂಗೇಶ್ವರ ಸ್ವಾಮಿಗಳು ಪಾದಯಾತ್ರೆಗೆ ಚಾಲನೆ ನೀಡಿದರು. ಭೋಜು ಹೂಗಾರರ ತೋಟದಲ್ಲಿ ಜನ್ಮೋತ್ಸವದ ಧಾರ್ಮಿಕ ಕಾರ್ಯಗಳು ಜರುಗಿದವು. ತಾಯಂದಿರಿಂದ ಗುರುಗಳ ನಾಮಕರಣ ನಡೆಯಿತು.

ಬನಹಟ್ಟಿಯ ದೇವಿ ಆರಾಧಕ ಗಂಗಾಧರ ಬುದ್ನಿ, ಶಿವಪುರದ ಚಿದಾನಂದ ಹೂಗಾರ ಆಶೀರ್ವಚನ ನೀಡಿದರು. ಬನಹಟ್ಟಿ, ರಾಂಪುರ, ರಬಕವಿ, ಮಹಾಲಿಂಗಪುರ ತೇರದಾಳ, ಹುನ್ನೂರು, ನಾವಲಗಿ, ಗಂಗಾವತಿ ಮತ್ತಿತರ ಗ್ರಾಮಗಳ ಸದ್ಭಕ್ತರು ಭಾಗವಹಿಸಿದ್ದರು. ವಿವಿಧ ಗ್ರಾಮಗಳ ಪ್ರಮುಖರಾದ ವೆಂಕಟೇಶ ದಂಡಿನ, ಅಲ್ಲಪ್ಪ ಗುಲಬಾವಿ, ಅರಳಿಕಟ್ಟಿ ಗೌಡ್ರು, ಮಲ್ಲಪ್ಪ ಆರಗಿ, ಶಂಕ್ರಪ್ಪ ಬೈಲಹೊಂಗಲ, ಪರಪ್ಪ ಹಳಿಂಗಳಿ, ಗಜಾನನ ಹುಲಕುಂದ, ಶಿವಾನಂದ ಗೋಲಬಾವಿ, ಸತೀಶ ಕಲಾದಗಿ, ಮಹಾಲಿಂಗ ಗೋಲಬಾವಿ, ಶಂಕರ ಕೋಹಳ್ಳಿ, ಕಾಡಪ್ಪ ಆಲ್ಗುಂಡಿ, ಮಲ್ಲಪ್ಪ ಹೊಸಮನಿ, ಪ್ರಭು ಬೆಳ್ಳುಬ್ಬಿ, ಸಂಜು ವಸ್ತ್ರದ, ಪ್ರಕಾಶ ಹೊಸಮನಿ, ಈರಪ್ಪ ಗೌಡ್ರು, ರಾಜು ಹಟ್ಟಿ, ಮಹಾದೇವ ಆರಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net