ಮಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಪ್ರಕರಣಕ್ಕೆ ಸಂಬಂಸಿ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಸಿದ್ದರಾಮಯ್ಯರನ್ನು ಹೇಗಾದರೂ ಸಿಲುಕಿಸಬೇಕಿದೆ. ಸಿಎಂ ವಿರುದ್ಧ ದೂರು ನೀಡಿರುವ ಟಿ.ಜೆ.ಅಬ್ರಹಾಂ ಹಿನ್ನೆಲೆ ನಿಮಗೆ ಗೊತ್ತಿದೆ, ಅವರಿಗೆ ಸುಪ್ರೀಂ ಕೋರ್ಟ್ ಕೂಡ 20 ಲಕ್ಷ ರೂ. ದಂಡ ಹಾಕಿದೆ. ಅವರ ನೀಡಿರುವ ದೂರನ್ನು ಪಡೆದ ಕೆಲವೇ ಗಂಟೆಗಳಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಗೆ ಶೋಕಾಸ್ ನೊಟೀಸ್ ಮಾಡಿದ್ದಾರೆ. ಯಾವುದೇ ಕಾನೂನು ತಜ್ಞರ ಜೊತೆಗೂ ಅವರು ಚರ್ಚೆ ಮಾಡಿಲ್ಲ. ನೂರಾರು ಪುಟಗಳ ದೂರು ಪಡೆದು ಕೆಲವೇ ಗಂಟೆಗಳಲ್ಲಿ ನೊಟೀಸ್ ನೀಡಿದ್ದಾರೆ ಎಂದರು.
*ಪಾದಯಾತ್ರೆಗೆ ಯಾವ ನೈತಿಕತೆ ಇದೆ
ಕಾನೂನು ಪ್ರಕಾರ ಹೋಗಿ ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ ತೋರಿಸಲಿ. ಸಿದ್ದರಾಮಯ್ಯ ಕಳೆದುಕೊಂಡ ಭೂಮಿ ವಾಪಸ್ ಪಡೆದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅವರ ಕಾನೂನಿನಡಿ ತಪು ತೋರಿಸಲಿ. ಅಧಿಕಾರ ದುರುಪಯೋಗದ ಬಗ್ಗೆ ಅವರು ನಮಗೆ ತೋರಿಸಲಿ. ಮೈಸೂರು ಮುಡಾದಲ್ಲಿ ಎಲ್ಲಾ ರಾಜಕೀಯ ನಾಯಕರು ಇದ್ದ ಬೋರ್ಡ್ ಇತ್ತು. ಆಗಲೂ ಅನೇಕ ಜನರಿಗೆ ಇವರು ಭೂಮಿ ಕೊಟ್ಟಿದ್ದಾರೆ. ಹಾಗಾಗಿ ಇವರ ಪಾದಯಾತ್ರೆಗೆ ಯಾವ ನೈತಿಕತೆ ಇದೆ ಎಂದರು.
*ನಿರ್ಬಂಧ ವಿಧಿಸಿ ಪಾದಯಾತ್ರೆಗೆ ಅವಕಾಶ
ಪಾದಯಾತ್ರೆ ವಿಚಾರದಲ್ಲಿ ಅಕತವಾಗಿ ಅನುಮತಿ ಸಹಜವಾಗಿ ನೀಡುವುದಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಅವಕಾಶ ಇದೆ. ನಿರ್ಬಂಧ ವಿಧಿಸಿ ಅವರಿಗೆ ಪಾದಯಾತ್ರೆಗೆ ಅವಕಾಶ ಕೊಡಲಾಗುತ್ತದೆ ಎಂದು ಬಿಜೆಪಿ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದರು.