

ಮುಗಳಖೋಡ: ಜಾತಿ ಜನಗಣತಿಯಲ್ಲಿ ಮಾಳಿ ಮಾಲಗಾರ ಸಮುದಾಯದ ಜನಸಂಖ್ಯೆ 83 ಸಾವಿರ ಇದೆ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಸಿದ್ದರಾಮಯ್ಯ ಸರ್ಕಾರವು ಇತ್ತೀಚೆಗೆ ನಡೆಸಿದ ಗಣತಿ ಅವೆಜ್ಞಾನಿಕವಾಗಿದೆ ಎಂದು ಮಾಳಿ ಮಾಲಗಾರ ಸಮುದಾಯದ ಅಧ್ಯ ಡಾ. ಸಿ.ಬಿ. ಕುಲಿಗೋಡ ಆರೋಪಿಸಿದರು.
ಪಟ್ಟಣದ ಚನ್ನಬಸವೇಶ್ವರ ವಿದ್ಯಾವರ್ಧಕ ಸಂದ ಆವರಣದ ಮಾಧವಾನಂದ ಸಭಾಭವನದಲ್ಲಿ ಮಾಳಿ ಮಾಲಗಾರ ಸಮುದಾಯದಿಂದ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾಳಿ ಮಾಲಗಾರರು 46 ಲಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಷ್ಟು ಕಡಿಮೆ ಜನಸಂಖ್ಯೆ ತೋರಿಸಿರುವುದು ಖಂಡನೀಯ. ಸರ್ಕಾರದ ಜಾತಿ ಜನಗಣತಿಯನ್ನು ಮರು ಪರಿಶೀಲನೆ ಮಾಡಬೇಕು. ಇಲ್ಲವಾದಲ್ಲಿ ನಾವೇ ಸಮುದಾಯದ ಗಣತಿ ಮಾಡಿ ವರದಿ ಸಲ್ಲಿಸುತ್ತೇವೆ. ಒಂದು ವೇಳೆ ಇದೇ ಮುಂದುವರಿದರೆ ಸಮುದಾಯದಿಂದ ಹೋರಾಟ ಮಾಡಲಾಗುತ್ತದೆ ಎಂದು ಗುಡುಗಿದರು. ಡಾ.ರವಿ ಕುರುಬೆಟ, ಕಾಡು ಮಾಳಿ, ಗಿರೀಶ ಬುಟಾಳಿ, ಮಹಾಂತೇಶ ಮಾಳಿ, ಕಾಶಿನಾಥ ಮಾಳಿ, ಮುರಿಗೆಪ್ಪ ಮಾಲಗಾರ ಮಾತನಾಡಿದರು.
ಸದಾಶಿವ ಹೊಸಮನಿ, ಗೋಪಾಲ ಯಡವಣ್ಣವರ, ಮಹಾದೇವ ತೇರದಾಳ, ಸಂಜು ಅಥಣಿ, ಉಧ್ಯಮಿ ಶಿವಪ್ಪ ಹಳ್ಳೂರ, ಪರಪ್ಪ ಕುಲಿಗೋಡ, ಶಿವಪುತ್ರ ಯಡವಣ್ಣವರ, ಸಂಜಯ ಕುಲಿಗೋಡ, ಮಹಾದೇವ ಹೊಸಟ್ಟಿ, ಬಸವರಾಜ ಬಂಬಲವಾಡ, ಮಲ್ಲಪ್ಪ ಗೋಲಬಾವಿ, ಸುಭಾಷ ಅಳಗೋಡಿ, ಮಹಾದೇವ ಬಂಬಲವಾಡ, ಬಾಳು ಮಾಳಿ, ಮಲ್ಲೇಶ ಲಿಂಬಿಗಿಡದ, ಸುರೇಶ ಕಾಳಿಂಗೆ, ಶಿವಪ್ಪ ತಾನಪ್ಪಗೋಳ, ಸಿದ್ದಪ್ಪ ಮೆಂಡಿಗೇರಿ ಇತರರು ಇದ್ದರು.