ನೂರು ದಿನದಲ್ಲಿ ಮೂರುಲೋಕ ತೋರಿಸಿದ ಸರ್ಕಾರ

ankola bjp
Published on

ಅಂಕೋಲಾ: ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಖಂಡಿಸಿ ಕಾರವಾರ-ಅಂಕೋಲಾ ಕ್ಷೇತ್ರ ಬಿಜೆಪಿ ವತಿಯಿಂದ ಪಟ್ಟಣದ ಜೈಹಿಂದ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಮಾತನಾಡಿ, ನೂರು ದಿನಗಳಲ್ಲಿ ಬಿಟ್ಟಿ ಯೋಜನೆಗಳಿಂದ ರಾಜ್ಯದ ಜನರಿಗೆ ಮೂರುಲೋಕ ತೋರಿಸಿದ ಕೀರ್ತಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ. ಕಾಂಗ್ರೆಸ್ ಸರ್ಕಾರ ಜನರಿಗೆ ಆಮಿಷವೊಡ್ಡಿ ಅಧಿಕಾರಕ್ಕೆ ಬಂದು ಈಗ ರೈತ ವಿರೋಧಿ ನೀತಿ ಅನುಸರಿಸಿತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಮಾತನಾಡಿ, ಎಸ್ಸಿಎಸ್ಟಿ ಇಲಾಖೆಯಲ್ಲಿನ 11 ಸಾವಿರ ಕೋಟಿ ರೂ.ಗಳನ್ನು ವಾಪಸ್ ಪಡೆದು ದಲಿತ, ಹಿಂದುಳಿದ ವರ್ಗಗಳ ವಿರೋಧಿ ಸರ್ಕಾರ ಎನಿಸಿದೆ ಎಂದರು.

ಬಿಜೆಪಿ ಮಂಡಳದ ಅಧ್ಯಕ್ಷೆ ಜಯ ನಾಯ್ಕ ಮಾತನಾಡಿದರು. ತಹಸೀಲ್ದಾರ್ ಪರವಾಗಿ ಶಿರಸ್ತೇದಾರ್ ಗಿರೀಶ ಜಾಂಬಾವಳಿಕರ ಮನವಿ ಸ್ವೀಕರಿಸಿದರು.

ಕಾರವಾರ ಮಂಡಳದ ಅಧ್ಯಕ್ಷ ಸುಭಾಷ ಗುನಗಿ, ರಾಘವೇಂದ್ರ ಭಟ್, ವಿ.ಎಸ್.ಭಟ್ ಕಲ್ಲೇಶ್ವರ, ಪ್ರಶಾಂತ ನಾಯಕ, ಭಾಸ್ಕರ ನಾರ್ವೇಕರ್, ಬಿಂದೇಶ ನಾಯಕ, ಸುಬ್ರಹ್ಮಣ್ಯ ರೇವಣಕರ, ದಾಮೋಧರ ರಾಯ್ಕರ, ಗಣೇಶ ನಾಯ್ಕ ಅಲಗೇರಿ, ಗಣಪತಿ ನಾಯ್ಕ, ವಿಶ್ವನಾಥ ನಾಯ್ಕ, ನಿಲೇಶ ನಾಯ್ಕ, ನಾಗರಾಜ ನಾಯ್ಕ, ತಾರಾ ನಾಯ್ಕ, ತಾರಾ ಗಾಂವಕರ, ಸುರಕ್ಷಾ ಭೋವಿ ಸೇರಿದಂತೆ ಹಲವರು ಉಪಸ್ಥಿರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net