ಮಠಗಳಿಗೆ ಸರ್ಕಾರ ನೆರವು ನೀಡಲಿ

Untitled-3
ಶಿವನಾಪುರದ ಶ್ರೀಆದಿಶಕ್ತಿ ಮಹಾ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ದ್ರೌಪದಿ ವರ್ಧಂತಿ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಶರತ್​ ಬಚ್ಚೇಗೌಡ, ಶ್ರೀಜಗದ್ಗುರು ರೇಣುಕಾನಂದ ಸ್ವಾಮೀಜಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಎಂಎಲ್ಸಿ ಪಿ.ಆರ್​.ರಮೇಶ್​, ವಿಶ್ರಾಂತ ಕುಲಪತಿ ವೇಣುಗೋಪಾಲ್​ ಇತರರಿದ್ದರು.
Published on

ನಂದಗುಡಿ : ಜನರಲ್ಲಿ ಸಮಾನತೆ, ಸಹಬಾಳ್ವೆಯ ತತ್ವ ಮೂಡಿಸುವಲ್ಲಿ ಗುರುಪೀಠಗಳ ಪಾತ್ರ ಹಿರಿದಾಗಿದೆ. ಮಠ ಮಾನ್ಯಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಮಾಜಿ ಸಂಸದ ಬಿ.ಎನ್​.ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಶಿವನಾಪುರದ ಶ್ರೀಆದಿಶಕ್ತಿ ಮಹಾ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ದ್ರೌಪದಿ ವರ್ಧಂತಿ ಹಾಗೂ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮಗಳಲ್ಲಿ ಸಾಮರಸ್ಯ ಬೆಳೆಸುವಲ್ಲಿ ಮಠ ಮಾನ್ಯಗಳು ಸಹಕಾರಿಯಾಗುತ್ತವೆ. ಎಲ್ಲ ಸಮುದಾಯಗಳ ಸಹಕಾರದೊಂದಿಗೆ ಗುರುಪೀಠಗಳು ಆರ್ಥಿಕವಾಗಿ ಸದೃಢವಾಗಿ ಬೆಳೆಯಲು ಸಾಧ್ಯ. ಧಾರ್ಮಿಕ ಕೇಂದ್ರಗಳು ಶಾಂತಿ ನೆಮ್ಮದಿ ನೀಡುವ ಕೇಂದ್ರಗಳಾಗಿವೆ. ದಾನಿಗಳು ಸಹಾಯಹಸ್ತ ನೀಡಿ ಮಠದ ಬೆಳವಣಿಗೆಗೆ ಶಕ್ತಿ ತುಂಬಬೇಕು ಎಂದು ಹೇಳಿದರು. ಶೈಕ್ಷಣಿಕವಾಗಿ ಅಸಾಧಾರಣ ಪ್ರತಿಭೆ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ನೀಡುವ ಗೌರವವೇ ಪ್ರತಿಭಾ ಪುರಸ್ಕಾರ. ಅದು ಮಕ್ಕಳ ಮುಂದಿನ ಸಾಧನೆಗಳಿಗೆ ಮಾರ್ಗದರ್ಶನ ನೀಡುತ್ತವೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾಡಿದ ಸಾಧನೆ ತೋರಿಸುವ ಒಂದು ಉತ್ತಮ ವೇದಿಕೆಯೇ ಪ್ರತಿಭಾ ಪುರಸ್ಕಾರವಾಗಿದೆ ಎಂದು ಹೇಳಿದರು.

ಶ್ರೀಆದಿಶಕ್ತಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀಪ್ರಣವಾನಂದಪುರಿ ಸ್ವಾಮೀಜಿ ಮಾತನಾಡಿ, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಉನ್ನತ ಮಟ್ಟಕ್ಕೆ ಹೋಗಲಿ ಎನ್ನುವ ಉದ್ದೇಶದಿಂದ ಪ್ರತಿಭಾಪುರಸ್ಕಾರ ನೀಡಿರುವುದು ಮಾದರಿ ಎನಿಸಿದೆ. ಇದು ಮುಂದಿನ ಪೀಳಿಗೆ ಪ್ರೋತ್ಸಾಹದಾಯಕವಾಗಲಿದೆ ಎಂದರು. ಶ್ರೀಆದಿಶಕ್ತಿ ಮಹಾ ಸಂಸ್ಥಾನ ಮಠದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ. ಮುನಿಯಪ್ಪ ಮಾತನಾಡಿ, ರಾಜ್ಯ ಮಟ್ಟದ ಪ್ರಥಮ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ 350 ವಿದ್ಯಾರ್ಥಿಗಳು ಭಾಗವಹಿಸಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ನೂರಾರು ಜನರು ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತವಾಗಿ ರಕ್ತವನ್ನು ದಾನ ಮಾಡಿದ್ದಾರೆ ಎಂದರು. ಐಪಿಎಸ್​ ಅಧಿಕಾರಿ ಸವಿತಾ, ತೋಟಗಾರಿಕೆ ಪ್ರಶಸ್ತಿ ಪುರಸತ ರಮೇಶ್​, ಎಂ.ವಿ.ಜೆ.ಆಸ್ಪತ್ರೆ ಉಪ ವೈದ್ಯಾಧಿಕಾರಿ ಡಾ.ಪ್ರಮೋದ್​, ವಹ್ನಿಕುಲ ಕ್ಷತ್ರಿಯ ಸಂದ ರಾಜ್ಯ ಅಧ್ಯಕ್ಷ ಕೃಷ್ಣಮೂರ್ತಿ, ಕೆ.ಲಕ್ಷ$್ಮಣ್​ಗೌಡ, ಜೆ.ಎನ್​.ನಾಗರಾಜು, ಮುಖಂಡರಾದ ಎಚ್​.ಎಂ ಸುಬ್ಬರಾಜು, ಕೆ.ನಾರಾಯಣಸ್ವಾಮಿ, ಲಕ್ಕೊಂಡಹಳ್ಳಿ ಮಂಜುನಾಥ್​, ಸಿ.ಜಯರಾಜ್​, ವಿಜಯಕುಮಾರ್​, ಸೋಮನಾಥ್​, ಸುನೀಲ್​, ರಾಕೇಶ್​, ಮುರುಳಿ, ಅಂಜನ್​ಕುಮಾರ್​, ಅರುಣ್​ಕುಮಾರ್​, ನಾಗರಾಜ್​, ಮುನಿಯಪ್ಪ, ಶೇಖರ್​ ಹಾಗೂ ಟ್ರಸ್ಟ್​ನ ಪದಾಧಿಕಾರಿಗಳು ಇದ್ದರು.

ಶ್ರಮ ಮತ್ತು ಪ್ರತಿಭೆಯಿಂದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಮಾಜದ ಎದುರು ಗೌರವಿಸುವುದು ಕರ್ತವ್ಯವಾಗಿದೆ. ಇದು ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧರಾಗಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಪ್ರದರ್ಶನ ನೀಡಲು ಇದು ಪ್ರೋತ್ಸಾಹ ನೀಡುತ್ತದೆ. > ಶರತ್​ ಬಚ್ಚೇಗೌಡ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net