ಬಡ ಸಾಗುವಳಿ ರೈತರಿಗೆ ಸರ್ಕಾರ ಪತ್ರ ನೀಡಲಿ

ಹುಣಸೂರು ತಾಲೂಕು ಕಚೇರಿ ಮುಂಭಾಗ ಕರ್ನಾಟಕ ಪ್ರಾಂತ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಗದೀಶ್ ಸೂರ್ಯ, ಚಿಕ್ಕಣ್ಣೇಗೌಡ, ಚವನರಾಣಿ, ಮೂರ್ತಿ, ವಜೀರ್ ಖಾನ್ ಇದ್ದರು.
ಹುಣಸೂರು ತಾಲೂಕು ಕಚೇರಿ ಮುಂಭಾಗ ಕರ್ನಾಟಕ ಪ್ರಾಂತ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಗದೀಶ್ ಸೂರ್ಯ, ಚಿಕ್ಕಣ್ಣೇಗೌಡ, ಚವನರಾಣಿ, ಮೂರ್ತಿ, ವಜೀರ್ ಖಾನ್ ಇದ್ದರು.
Published on

ಹುಣಸೂರು: ಗೋಮಾಳ, ಅರಣ್ಯ ಭೂಮಿ ಹಾಗೂ ನಗರ ವ್ಯಾಪ್ತಿಯ 10 ಕಿಮೀ ವ್ಯಾಪ್ತಿಯ ತುಂಡು ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಬಡ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ತಾಲೂಕು ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.

ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಸಮಿತಿ ಕಾರ್ಯಕರ್ತರು, ಬಡರೈತರ ರಕ್ಷಣೆಗೆ ಸರ್ಕಾರ ಮುಂದಾಗಲಿ, ಸಾಗುವಳಿ ಪತ್ರ ಪಡೆಯುವುದು ನಮ್ಮ ಹಕ್ಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ಸಮಿತಿ ಜಿಲ್ಲಾ ಕಾರ್ಯದರ್ಶಿ ಜಗದೀಶ್‌ಸೂರ್ಯ ಮಾತನಾಡಿ, ದಶಕಗಳಿಂದ ಸಾಗುವಳಿದಾರರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಭೂಮಿಯ ಅನುಭೋಗದಲ್ಲಿದ್ದರೂ ಭೂಮಿಯ ಮೇಲಿನ ಹಕ್ಕು ಅವರಿಗೆ ಸಿಗುತ್ತಿಲ್ಲ. ಆಳುವ ಜನರು ಬಡರೈತರ ಬವಣೆಯನ್ನು ಗಮನಿಸುತ್ತಿಲ್ಲ. ಕುಟುಂಬ ಬೆಳೆಯುತ್ತಲೇ ಸಮಸ್ಯೆಗಳು ಬೆಳೆಯುತ್ತಿದ್ದು, ಬಡರೈತರು ಅನಾಹುತ ಮಾಡಿಕೊಳ್ಳುವತ್ತ ಮನಸು ಹರಿಸುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಗೋಮಾಳ, ಅರಣ್ಯಭೂಮಿಯ ತುಂಡುಭೂಮಿಯಲ್ಲಿ ಜೀವನ ಕಂಡುಕೊಂಡಿರುವ ರೈತರ ಬದುಕಿಗೆ ಬೆನ್ನೆಲುಬಾಗಿ ನಿಂತು ಹಕ್ಕುಪತ್ರ ನೀಡುವ ಕಾರ್ಯ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಚಿಕ್ಕಣ್ಣೇಗೌಡ ಮಾತನಾಡಿದರು. ತಾಲೂಕು ಅಧ್ಯಕ್ಷ ಚಂದ್ರಶೇಖರ್, ತಾಲೂಕು ಕಾರ್ಯದರ್ಶಿ ಹಳ್ಳದಕೊಪ್ಪಲು ಪುಟ್ಟರಾಜು, ಸಿದ್ದಯ್ಯ, ಮುಳ್ಳೂರು ಮಹಾದೇವ, ಗೌರಿಪುರ ಸಿದ್ದಯ್ಯ, ಚನ್ನೇಗೌಡ, ವೆಂಕಟನಾಯಕ, ಅಭಿಮಾನ್, ಚಂದರಾಜ್, ಗೋಪಾಲ್, ಶಂಕರ, ಯಾಕೂಬ್, ತರೀಕಲ್ಲು ಮೂರ್ತಿ, ವಜೀರ್ ಸಾಬ್, ಮೇರಾಣಿ, ಚವನರಾಣಿ, ಲೈಲು, ಕಾಂಚನಾ ಮೋದೂರು ಮೂರ್ತಿ, ದೇವಮ್ಮ, ಮಂಜುಳ, ಕಾಳಮ್ಮ ಮುಂತಾದವರು ಇದ್ದರು. ತಹಸೀಲ್ದಾರ್ ಜೆ.ಮಂಜುನಾಥ್‌ರಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net