

ರಾಯಬಾಗ: ಹಿಂದುಗಳನ್ನು ಗುರಿಯಾಗಿಸಿ ದಾಳಿ ಮಾಡಿದ ಉಗ್ರರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಶಾಸಕ ಡಿ.ಎಂ.ಐಹೊಳೆ ಆಗ್ರಹಿಸಿದರು.
ಪಟ್ಟಣದ ಅಭಾಜಿ ವೃತ್ತದಲ್ಲಿ ಪಹಲ್ಗಾಮ್‌ನಲ್ಲಿ ಹಿಂದುಗಳ ಮೇಲಿನ ಉಗ್ರರ ದಾಳಿ ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳದ ತಾಲೂಕು ಘಟಕದಿಂದ ಶನಿವಾರ ಕಂದಾಯ ನಿರೀಕ್ಷಕ ಸೋಮಶೇಖರ ಜೋರೆ ಮೂಲಕ ಶನಿವಾರ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ, ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತೀಯ ಸಂಚಾಲಕ ವೆಂಕಟೇಶ ದೇಶಪಾಂಡೆ, ಗೀತಾ ಮೇತ್ರಿ ಮಾತನಾಡಿದರು.
ಪಟ್ಟಣದ ಅಭಾಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು. ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ, ಅನಂತ ಸ್ವಾಮೀಜಿ, ಪಪಂ ಅಧ್ಯಕ್ಷ ಅಶೋಕ ಅಂಗಡಿ, ಆನಂದ ಹೊಸಮನಿ, ಮಹೇಶ ಹಿರೇಮಠ, ಯಲ್ಲಪ್ಪ ವಡ್ಡರ, ವಿದ್ಯಾ ಕದ್ದು, ಭಾರತಿ ಪುಂಡಿಪಲ್ಲೆ, ಸಿದ್ದು ದೇಸಾಯಿ, ಪ್ರಸಾದ ಕಾತರಕಿ, ಏಕನಾಥ ಮಾಚಕನೂರ, ನಾರಾಯಣ ಮೇತ್ರಿ ಇತರರಿದ್ದರು.