ಸರ್ಕಾರ ಮೂಲಭೂತ ಯೋಜನೆಗಳಿಗೆ ಒತ್ತು ನೀಡಲಿ

raichur
raichur
Published on

 ರಾಯಚೂರು ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರ ಜ್ವಾಲಂತ ಸಮಸ್ಯೆಗಳಿದ್ದು, ಆದರೆ ಯಾರು ಸ್ವಂದಿಸುತ್ತಿಲ್ಲ, ಅಲ್ಲದೇ ಅನವಶ್ಯ ಟೂಲ್‌ಕಿಟ್ಗಳ ಮೂಲಕ ಕಾರ್ಮಿಕರ ಸೆಸ್ ಹಣ ಬಳಕೆಯಾಗುತ್ತಿದ್ದು ಅದನ್ನು ನಿಲ್ಲಿಸಿ ಕಾರ್ಮಿಕರ ಮೂಲಭೂತ ಯೋಜನೆಗಳನ್ನು ಒದಗಿಸುವಂತೆ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಸಂಚಾಲಯ ವೀರನಗೌಡ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವರಿಗೆ ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದರೂ ಸಚಿವರು ಅವೈಜ್ಞಾನಿಕ ಮಾನದಂಡಗಳು ಹಾಗೂ ಅನವಶ್ಯಕ ಹೊಸ ಹೊಸ ಯೋಜನೆಗಳನ್ನು ಸಚಿವರು ತರುತ್ತಿದ್ದು, ಇದರಿಂದ ಮಂಡಳಿಯಿಂದ ನೀಡುತ್ತಿರುವ ಕಾರ್ಮಿಕರ ಸೆಸ್ ಹಣ ದುರುಪಯೋಗವಾಗುತ್ತಿದೆ.

ಅದರಿಂದ ಕಾರ್ಮಿಕರಿಗೆ ಅವಶ್ಯವಿರುವ ಮೂಲ ಯೋಜನೆಗಳಾದ ಶೈಕ್ಷಣಿಕ ಸಹಾಯಧನ, ಮದುವೆ ಮತ್ತು ಮರಣ ಸಹಾಯಧನ , ಪಿಂಚಣಿ ಇನ್ನಿತರೆ ಸವಲತ್ತುಗಳು ಸಹಾಯಧನವನ್ನು ಒಂದು ವರ್ಷದಿಂದ ನೀಡುತ್ತಿಲ್ಲ. ಈ ಕೂಡಲೇ ಒದಗಿಸಬೇಕು ಇಲ್ಲವಾದಲ್ಲಿ ಮುಂದೆ ಕಾರ್ಮಿಕ ಸಚಿವರ ಮನೆ ಮುಂದೆ ಧರಣಿ ಮಾಡಲಾಗುವುದೆಂದು ಎಚ್ಚರಿಸಿದರು.


ಈ ಸಂದರ್ಭದಲ್ಲಿ ಆನಂದಪ್ಪ , ವೀರಣ್ಣ ಹೊಸೂರು,ರಂಗಪ್ಪ , ತಿಮ್ಮಪ್ಪ ಸ್ವಾಮಿ ಮಲಿಯಾಬಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net