ಆಕ್ಸಿಜನ್ ಪೂರೈಕೆಗೆ ಸಾರಿಗೆ ದರ ನಿಗದಿಪಡಿಸಿದ ಸರ್ಕಾರ

Oxygen
Published on

ಬೆಂಗಳೂರು: ಕೊರೊನಾ ಸೋಂಕಿತರಿಗೆ ವೈದ್ಯಕೀಯ ಲಿಕ್ವಿಡ್ ಆಕ್ಸಿಜನ್ ಹಾಗೂ ಆಕ್ಸಿಜನ್ ಸಿಲಿಂಡರ್ ಪೂರೈಕೆಗಾಗಿ ಸಾರಿಗೆ ದರ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ಬುಧವಾರ ಆದೇಶ ಹೊರಡಿಸಿದ್ದು, ಕೇಂದ್ರ ಸರ್ಕಾರದ ಸೂಚನೆಯಂತೆ ಇತ್ತೀಚೆಗೆ ನಡೆದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮತಿಯ ತೀರ್ಮಾನದಂತೆ ಈ ಆದೇಶ ಹೊರಡಿಸಲಾಗಿದೆ.

10 ಟನ್ ವರೆಗಿನ ದ್ರವರೂಪದ ವೈದ್ಯಕೀಯ ಆಕ್ಸಿಜನ್ ಮತ್ತು ಆಕ್ಸಿಜನ್ ಸಿಲಿಂಡರ್‌ಗಳ ಪೂರೈಕೆಗೆ ಸಾಗಣೆಗೆ (ಬಂದು ಹೋಗುವುದು ಸೇರಿ) ಪ್ರತಿ ಕಿ.ಮೀ.ಗೆ 35 ರೂ. ನಿಗದಿಪಡಿಸಲಾಗಿದೆ. 10 ರಿಂದ 15 ಟನ್ ವರೆಗೆ ಪ್ರತಿ ಕಿ.ಮೀ.ಗೆ 40 ರೂ., 15 ರಿಂದ 20 ಟನ್‌ಗೆ 45 ರೂ., 20 ರಿಂದ 30 ಟನ್‌ಗೆ 52.50 ರೂ. ಹಾಗೂ 30 ಟನ್ ಮೇಲ್ಪಟ್ಟ ಪ್ರಮಾಣಕ್ಕೆ ಪ್ರತಿ ಕಿ.ಮೀ.ಗೆ 60 ರೂ. ನಿಗದಿಪಡಿಸಲಾಗಿದೆ.

ಆದೇಶ ತಕ್ಷಣದಿಂದ ಜಾರಿಗೆ ಬರಲಿದ್ದು, 2021ರ ಮಾ.31ರ ವರೆಗೆ ಅನ್ವಯವಾಗಲಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net