ಪಾಳು ಬಿದ್ದಿದೆ ಸರ್ಕಾರಿ ಶಾಲಾ ಕಟ್ಟಡ : ಜಕ್ರಿಬೆಟ್ಟು ಸ್ಕೂಲ್ ಮುಚ್ಚಿ ಕಳೆಯಿತು ಹಲವು ವರ್ಷ : ದುರಸ್ತಿಗೆ ವ್ಯಯಿಸಿದ ದುಡ್ಡು ವ್ಯರ್ಥ

New Project (1)
Published on

ಸಂದೀಪ್ ಸಾಲ್ಯಾನ್

ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿ ಹಲವು ವರ್ಷಗಳು ಸಂದವು. ಹೆಂಚಿನ ಛಾವಣಿಯ ಶಾಲೆ ಕಟ್ಟಡ ಹಾಗೂ ಅಕ್ಷರ ದಾಸೋಹದ ಕೊಠಡಿ ಉಪಯೋಗ ಮಾಡದೆ ಪಾಳುಬಿದ್ದಿದೆ.

ಈ ಶಾಲೆಗೆ 65 ವರ್ಷಗಳ ಇತಿಹಾಸವಿದೆ. ಈ ಭಾಗದ ಮಕ್ಕಳಿಗೆ ಐದನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆಯುವ ಅವಕಾಶವಿತ್ತು. ಕ್ರಮೇಣ ಶಾಲೆಯ ಆಸುಪಾಸಿನಲ್ಲಿ ಖಾಸಗಿ ಶಾಲೆಗಳು ತಲೆಯೆತ್ತಿದ ಪರಿಣಾಮ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿದ್ದು, 7 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿತು. ಸದ್ಯ 5 ತರಗತಿ ಕೋಣೆಗಳು, ಅಕ್ಷರ ದಾಸೋಹದ ಕೊಠಡಿ, ಶೌಚಗೃಹ, ಕಾಂಕ್ರೀಟ್ ರಸ್ತೆ ಬಳಕೆಯಿಲ್ಲದೆ ವ್ಯರ್ಥವಾಗಿದೆ. ಶಾಲೆಗೆ ಒಟ್ಟು 39 ಸೆಂಟ್ಸ್ ಜಾಗವಿದ್ದು, ವರ್ಷಕ್ಕೆ ನಾಲ್ಕು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿದ ಇತಿಹಾಸವಿದೆ. ಶಾಲೆ ಮುಚ್ಚಿದ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿತ್ತು.

ಮತಗಟ್ಟೆಯಾಗಿ ಬಳಕೆ: ಚುನಾವಣೆ ಸಂದರ್ಭ ಮತಗಟ್ಟೆಯಾಗಿ ಈ ಶಾಲೆ ಬಳಕೆಯಾಗುತ್ತಿದೆ. ಕೇವಲ ಒಂದು ದಿನಕ್ಕಾಗಿ ಪುರಸಭೆ ಸಾವಿರಾರು ರೂ.ಖರ್ಚು ಮಾಡಿ ದುರಸ್ತಿ ಮಾಡಬೇಕಾಗುತ್ತದೆ. ಚುನಾವಣೆ ಮುಗಿದ ಬಳಿಕ ಬೀಗ ಹಾಕಿ ತೆರಳಿದರೆ ಮತ್ತೆ ಮುಂದಿನ ಚುನಾವಣೆಗೆ ಬೀಗ ತೆರೆಯುವುದು. ಆಗ ಮತ್ತೆ ಖರ್ಚು ಮಾಡಿ ದುರಸ್ತಿ ಮಾಡಬೇಕಾಗುತ್ತದೆ.

ಪೌರಕಾರ್ಮಿಕರ ವಸತಿಗೆ ಪ್ರಸ್ತಾವ

ತಾತ್ಕಾಲಿಕ ನೆಲೆಯಲ್ಲಿ ಪೌರ ಕಾರ್ಮಿಕರಿಗೆ ವಸತಿಯಾಗಿ ಬಳಕೆ ಮಾಡಲು ಬಂಟ್ವಾಳ ಪುರಸಭೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲು ತೀರ್ಮಾನಿಸಿದೆ. ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರ್ ಕಳೆದ ಸಾಮಾನ್ಯ ಸಭೆಯಲ್ಲಿ ಈ ಪ್ರಸ್ತಾವ ಮುಂದಿಟ್ಟಿದ್ದಾರೆ. ಈ ಬಗ್ಗೆ ಚರ್ಚೆ ನಡೆದು ಶಿಕ್ಷಣ ಇಲಾಖೆ ಹಾಗೂ ತಹಸೀಲ್ದಾರ್‌ಗೆ ಪತ್ರ ಬರೆಯಲು ಪುರಸಭೆ ತೀರ್ಮಾನಿಸಿದೆ. ಪೌರ ಕಾರ್ಮಿಕರು ಪ್ರಸ್ತುತ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಜಕ್ರಿಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳಕೆಯಿಲ್ಲದೆ ನಿಷ್ಪ್ರಯೋಜಕವಾಗಿದೆ. ಚುನಾವಣೆ ಸಂದರ್ಭ ಮಾತ್ರ ಬಳಕೆಯಾಗುತ್ತದೆ. ದುರಸ್ತಿಗೆ ಪುರಸಭೆ ಅನುದಾನ ನೀಡುತ್ತದೆ. ಹಾಗಾಗಿ ಈ ಕಟ್ಟಡವನ್ನು ಪೌರಕಾರ್ಮಿಕರಿಗೆ ವಸತಿಯಾಗಿ ಬಳಕೆ ಮಾಡಲು ನೀಡಿದರೆ ಉತ್ತಮ ಜನಾರ್ದನ ಚೆಂಡ್ತಿಮಾರ್, ಬಂಟ್ವಾಳ ಪುರಸಭೆ ಸದಸ್ಯರು. ಸ್ಥಿರೀಕರಣದ ಬಳಿಕ ಶಿಕ್ಷಣ ಇಲಾಖೆಯ ಅನುಮತಿಗಾಗಿ ಪುರಸಭೆಯಿಂದ ಪತ್ರ ಬರೆಯಲಾಗುತ್ತದೆ. ಅನುಮತಿ ಸಿಕ್ಕಿದರೆ ಪೌರ ಕಾರ್ಮಿಕರಿಗೆ ವಸತಿಯಾಗಿ ಬಳಕೆ ಮಾಡಲು ಅವಕಾಶವಿರುತ್ತದೆ. ರೇಖಾ ಜೆ.ಶೆಟ್ಟಿ, ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿಗಳು https://www.vijayavani.net/necessary-action-based-on-election-guidelines https://www.vijayavani.net/selection-of-vamana-pujari-surla-as-president

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net