ಸರ್ಕಾರ ನೀಡಿದ ಭರವಸೆ ವಿಲ

14 MANVI 02
ಮಾನ್ವಿ ಸಮೀಪದ ಬಲ್ಲಟಗಿ ಗ್ರಾಮದ ಶಾಸಕರ ಮನೆ ಮುಂದೆ ಮಾದಿಗ ಮತ್ತು ಮಾದಿಗ ಉಪಜಾತಿ ಸಂಘಟನೆಗಳ ಒಕ್ಕೂಟದಿಂದ ತಮಟೆ ಚಳವಳಿ ನಡೆಸಿ ಶಾಸಕ ಹಂಪಯ್ಯನಾಯಕಗೆ ಮನವಿ ಸಲ್ಲಿಸಲಾಯಿತು. ಬಸವರಾಜ ನಕ್ಕುಂದಿ, ಅಜಿತ್ ಸಿರವಾರ, ಬಸವರಾಜ ಹರವಿ, ಪರಶುರಾಮ ಬಾಗಲವಾಡ, ಗಣೇಶ ಸಂಗಾಪೂರ, ಹನುಮಂತ ಸಾಧು, ನಾಗರಾಜ ಭಂಡಾರಿ, ಚಂದ್ರು ಜಾನೇಕಲ್, ಮುತ್ತಣ್ಣ ಸೀಕಲ್ ಇನ್ನಿತರರು ಇದ್ದರು.
Published on

ಮಾನ್ವಿ: ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲು ಸದನದಲ್ಲಿ ಒತ್ತಾಯಿಸುವಂತೆ ಆಗ್ರಹಿಸಿ ಮಾದಿಗ ಮತ್ತು ಮಾದಿಗ ಉಪಜಾತಿ ಸಂಘಟನೆಗಳ ಒಕ್ಕೂಟದಿಂದ ಬಲ್ಲಟಗಿ ಗ್ರಾಮದ ಶಾಸಕರ ಮನೆ ಮುಂದೆ ಶನಿವಾರ ತಮಟೆ ಚಳವಳಿ ನಡೆಸಿ ಶಾಸಕ ಹಂಪಯ್ಯನಾಯಕಗೆ ಮನವಿ ಸಲ್ಲಿಸಲಾಯಿತು.

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡುವ ಮೂಲಕ ಒಳಮೀಸಲಾತಿ ಜಾರಿಗೆ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಕ್ಕೆ ನೀಡಿದೆ. ಈಗಾಗಲೇ ಹರಿಯಾಣ ಸರ್ಕಾರ ಮೀಸಲಾತಿ ಜಾರಿ ಮಾಡಿದೆ.

ನಮ್ಮ ರಾಜ್ಯದಲ್ಲಿ ಜಾರಿ ಮಾಡಿಲ್ಲ. ಡಿ.16 ರಂದು ಬೆಳಗಾವಿಯಲ್ಲಿ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಮೊದಲ ಸಂಪುಟ ಸಭೆಯಲ್ಲಿಯೆ ಜಾರಿ ಮಾಡುವ ಭರವಸೆ ನೀಡಿತ್ತು. ಇದುವರೆಗೂ ಭರವಸೆ ಈಡೆರಿಸಿಲ್ಲ ಮೀಸಲಾತಿ ಜಾರಿ ಆಗುವವರೆಗೆ ಯಾವುದೆ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಬಾರದು ಎಂದರು.

ಮಾದಿಗ, ಸಮಗಾರ, ಮಚಗಾರ, ಡೋಹರ, ಡಕ್ಕಲಿಗ ಉಪಜಾತಿ ಸಂಘಟನೆಗಳ ಒಕ್ಕೂಟದ ಮುಖಂಡರಾದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net