

* ಉಳಿವಿಗಾಗಿ ಸರ್ಕಾರದ ಮುಂದೆ ಹಕ್ಕೋತ್ತಾಯ ಮಂಡಿಸಿ
* 17ನೇ ಕನ್ನಡ ಸಾಹಿತ್ಯ ಸಮ್ಮೇನದಲ್ಲಿ ಬರಗೂರು ರಾಮಚಂದ್ರಪ್ಪ ಸಲಹೆ
ಬೆಂಗಳೂರು: ಸರ್ಕಾರವೇ ಪರೋಕ್ಷವಾಗಿ ಕನ್ನಡಕ್ಕೆ ಕುತ್ತು ತರುವ ಪ್ರಯತ್ನದಲ್ಲಿದೆ. ಶಿಕ್ಷಣದಲ್ಲಿ ಆದ್ಯತೆ ನೀಡುವಂತೆ ಸರ್ಕಾರದ ಮುಂದೆ ಹಕ್ಕೋತ್ತಾಯ ಮಂಡಿಸಲು ಮುಂದಾಗಬೇಕು ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ಅಂಬರೀಶ್ ಸಭಾಂಗಣದಲ್ಲಿ ನಿರ್ಮಿಸಿದ್ದ ಸರ್.ಮಿರ್ಜಾ ಇಸ್ಮಾಯಿಲ್ ವೇದಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ 17ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡವಿಲ್ಲದೆ ಶಿಕ್ಷಣ, ಉದ್ಯೋಗ, ಆಡಳಿತವಿಲ್ಲ ಎಂಬ ಸನ್ನಿವೇಶವನ್ನು ಸೃಷ್ಟಿಸಬೇಕು ಎಂದು ಎಚ್ಚರಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕೆ ಆದ್ಯತೆ ನೀಡದೆ ಹೋದರೆ, ನೆಲದ ಭಾಷೆಯಲ್ಲಿ ಸಂವಾದ ನಡೆಸಲೂ ಸಾಧ್ಯವಾಗದ ಭೀಕರ ಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಆದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡವನ್ನು ಗಟ್ಟಿಗೊಳಿಸಲು ಬೇಕಾದ ಹಕ್ಕೋತ್ತಾಯಗಳನ್ನು ಸರ್ಕಾರದ ಮುಂದೆ ಮಂಡಿಸಬೇಕಿದೆ ಎಂದು ತಿಳಿಸಿದರು.
ಕನ್ನಡದ ಜನರನ್ನು ಉಳಿಸಿಕೊಂಡರೆ ಅವರು ಭಾಷಾಯನ್ನು ಉಳಿಸಿಕೊಳ್ಳುತ್ತಾರೆ. ಆಡಳಿತ ಕ್ಷೇತ್ರದಲ್ಲಿ ಕನ್ನಡ ಆರೋಗ್ಯಕರವಾಗಿದೆ. ಸಾವಾನ್ಯ ಜನ, ಹೋರಾಟಗಾರರು ಹಾಗೂ ಲೇಖಕರು ಕನ್ನಡವನ್ನು ಉಳಿಸಿಕೊಂಡು ಬಂದಿದ್ದಾರೆ. ಕನ್ನಡಿಗರಿಗೆ ಒಳ್ಳೆಯ ಶಿಕ್ಷಣ, ಉದ್ಯೋಗ ನೀಡಿದರೆ ಅವರು ಭಾಷೆಯನ್ನು ಉಳಿಸಿಕೊಳ್ಳುತ್ತಾರೆ. ಸರ್ಕಾರದ ಕ್ರಿಯಾ ಯೋಜನೆಗಳು ಈ ನಿಟ್ಟಿನಲ್ಲಿಯೇ ರೂಪುಗೊಳ್ಳಬೇಕು ಎಂದರು.
ಸಮ್ಮೇಳನಾಧ್ಯಕ್ಷ ಶೂದ್ರ ಶ್ರೀನಿವಾಸ್, 16ನೇ ಸಮ್ಮೇಳನಾಧ್ಯಕ್ಷೆ ಎಚ್.ಎಸ್. ಶ್ರೀಮತಿ, ಚಲನಚಿತ್ರ ನಟ ದೊಡ್ಡಣ್ಣ, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಉಪಸ್ಥಿತರಿದ್ದರು.
* ಮರು ಚಿತಂನೆಗೆ ಒತ್ತಾಯ
ಕಡ್ಡಾಯ ಶಿಕ್ಷಣ ನೀತಿಯಂತೆ ಕಿರಿಯ ಪ್ರಾಥಮಿಕ ಶಾಲೆಗಳನ್ನು ರಾಜ್ಯ ಸರ್ಕಾರ ಉಳಿಸಿಕೊಳ್ಳಬೇಕು. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳು ದುಡ್ಡನ್ನು ಎಳೆಯುತ್ತಿದಿಯೋ ಅಥವಾ ಶಾಲೆಗಳನ್ನೋ ಎಂಬುದು ತಿಳಿಯುತ್ತಿಲ್ಲ. ಪ್ರಾಥಮಿಕ, ಕಿರಿಯ ವಿದ್ಯಾರ್ಥಿಗಳನ್ನು ಒಟ್ಟಿಗೆ ಓದಿಸುವುದು ಅನ್ಯಾಯ. ಇದಕ್ಕೆ ಆರಂಭದಲ್ಲಿ ವಿರೋಧ ವ್ಯಕ್ತವಾದರು ಸರ್ಕಾರ ಗಮನ ಹರಿಸಲಿಲ್ಲ. ಕೆಪಿಎಸ್ ವ್ಯಾಗ್ನೆಟ್ ಶಾಲೆಗಳ ಸ್ವರೂಪದ ಬಗ್ಗೆ, ದ್ವಿಭಾಷಾ ವಾಧ್ಯಮ ಬೋಧನೆ ಬಗ್ಗೆ ಮರು ಚಿಂತನೆ ವಾಡಬೇಕು ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು.
ಭಾಷೆಗೆ ಮರಣ ಶಾಸನ:
ಕೆಪಿಎಸ್ ಶಾಲೆಗಳು ಕನ್ನಡ ಭಾಷೆಗೆ ಮರಣ ಶಾಸನವಾಗಿವೆ. ಆದರೂ ಸಹ ಹೋಬಳಿಗೊಂದ ಕೆಪಿಎಸ್ ತರಲು ಶಾಸಕರು ಪೈಪೋಟಿ ನಡೆಸುತ್ತಿದ್ದಾರೆ. ಈ ಬಗ್ಗೆ ಮತದಾರರಿಗೆ ಭರವಸೆ ಸಹ ನೀಡಿದ್ದಾರೆ. ಕನ್ನಡ ಶಾಲೆಗಳು ಆಂಗ್ಲ ವಾಧ್ಯಮ ಶಾಲೆಗಳಾಗಿ ಬದಲಾಗುತ್ತವೆ ಎಂದು ಕಸಾಪ ಆಡಳಿತಾಧಿಕಾರಿ ಕೆ.ಎ.ದಯಾನಂದ ಕಳವಳ ವ್ಯಕ್ತಪಡಿಸಿದರು.
* ಸಮ್ಮೇಳಾನ್ಯಕ್ಷರ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷ ಶೂದ್ರ ಶ್ರೀನಿವಾಸ್ ಅವರ ಮೆರವಣಿಗೆ ಶಾಸಕ ಡಾ.ಉದಯ್ ಬಿ.ಗರುಡಾಚಾರ್ ಚಾಲನೆ ನೀಡಿದರು.
ಬಾಲ್ಬಾಗ್ ಉದ್ಯಾನವನದಿಂದ ಪ್ರಾರಂಭವಾದ ಮೆರವಣಿಯೂ ನ್ಯಾಷನಲ್ ಕಾಲೇಜು ವೃತ್ತ, ಸಜ್ಜನ್ ರಾವ್, ಬಸಪ್ಪ ವೃತ್ತ, ಕೆಂಪೇಗೌಡ ಆಸ್ಪತ್ರೆ ವೃತ್ತ, ಮಕ್ಕಳ ಕೂಡ ವೃತ್ತ ಮಾರ್ಗವಾಗಿ ಸಾಗಿ ಪರಿಷತ್ ಭವನದ ಸಮೀಪ ಕೊನೆಗೊಂಡಿತು. ತಮಟೆ, ವೀಗಾಸೆ ಸೇರಿ ವಿವಿಧ ಕಾಲತಂಡಗಳು ಮೆರವಣಿಗೆಗೆ ಮೆರಗು ನೀಡಿವು.
ಲೇಖಕಿ ಡಾ.ವಸುಂಧರಾ ಭೂಪತಿ ಬರೆದಿರುವ ಕನ್ನಡದ ಹೆಮ್ಮೆ ಡಾ.ಸರೋಜಿನಿ ಮಹಿಷಿ, ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರ ಗಿರಿಜನ ನಾಡಿಗೆ ಪಯಣ, ಕುಪ್ಪಳಿಯಿಂದ ಕುಪ್ಪಳಿಗೆ ಪ್ರವಾಸ ಕಥನ, ಡಾ.ಮಂಗಳ ಜ್ಯೋತ್ಸ್ನಾ ಅವರ ಆಯುರ್ವೇದ ಒಂದು ಒಳನೋಟ ಕೃತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.