ಗಗನಚುಕ್ಕು ಅಭಿವೃದ್ಧಿಗೆ ಸರ್ಕಾರ ಸಿದ್ಧವಿದೆ

16 mlv 2
Published on


ಮಳವಳ್ಳಿ : ಶಿವನ ಸಮುದ್ರದ ಗಗನಚುಕ್ಕಿ ಜಲಪಾತವನ್ನು ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು.


ತಾಲೂಕಿನ ಶಿವನಸಮುದ್ರ(ಬ್ಲಫ್)ಸಮೀಪವುರುವ ಗಗನಚುಕ್ಕಿ ಜಲಪಾತದ ಬಳಿ ಭಾನುವಾರ ನಡೆಯುತ್ತಿದ್ದ ಜಲಪಾತೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಬಯಲು ಸೀಮೆಯ ಪ್ರದೇಶದವರು. ಆ ಭಾಗದಲ್ಲಿ ಈ ರೀತಿಯ ಜಲ ವೈಭವನ್ನುಕಾಣಲು ಸಾಧ್ಯವಿಲ್ಲ ಎಂದರು.


ಕೋಲಾರ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಿನ ರೀತಿಯಲ್ಲಿ ತಲೆದೂರಿದ್ದು, ಬೆಂಗಳೂರು ನಗರದ ವಾಸಿಗಳು ಬಳಸಿದ ಕೊಳಚೆ ನೀರನ್ನು ಸಂಸ್ಕರಿಸಿ ನಮ್ಮ ಭಾಗದ ಕೆರೆ-ಕಟ್ಟೆಗಳಿಗೆ ಹಾಗೂ ಕುಡಿಯಲು ಬಳಸಲಾಗುತ್ತಿದ್ದೆ. ಮಂಡ್ಯ ಜಿಲ್ಲೆ ಭಾಗದ ಜನರು ತುಂಬಾ ಅದೃಷ್ಟವಂತರು. ಕಾವೇರಿ ಕೊಳ್ಳದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕಾವೇರಿ ನದಿ ತುಂಬಿ ಹರಿದು ಗಗನಚುಕ್ಕಿ ಜಲಪಾತ ಧುಮ್ಮಿಕ್ಕುತ್ತಿದೆ. ಇಲ್ಲಿನ ಜಲಪಾತವನ್ನು ನೋಡುತ್ತಿದ್ದರೇ ದಕ್ಷಿಣ ಅಮೇರಿಕಾದ ಪ್ರಸಿದ್ಧ ಜಲಪಾತವನ್ನೂ ಮೀರಿಸುವಂತೆ ಭಾಸವಾಗುತ್ತಿದ್ದು, ಇಂತಹ ಪ್ರಸಿದ್ಧ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಚಿಂತನೆ ನೆಡೆಸಬೇಕಿದೆ ಎಂದರು.


ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿದರು. ಶಾಸಕರಾದ ರವಿಕುಮಾರ್ ಗಣಿಗ, ಕೆ.ಎಂ.ಉದಯ್, ರವಿಶಂಕರ್, ಸುಧಾಂದಾಸ್, ಎಡಿಜಿಪಿ ಅರುಣ್ ಚಕ್ರವರ್ತಿ, ಜಿಲ್ಲಾಧಿಕಾರಿ ಕುಮಾರ್, ತಹಸೀಲ್ದಾರ್ ಬಿ.ವಿ.ಕುಮಾರ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net