

ಎನ್.ಆರ್.ಪುರ: ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕ್ಷೇತ್ರದ ಎಲ್ಲ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.
ಬುಧವಾರ ಶಾಸಕರ ಕಚೇರಿಯಲ್ಲಿ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳನ್ನು ವಿತರಿಸಿ ಮಾತನಾಡಿ, ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಸರ್ಕಾರ ವಿಶೇಷ ಚೇತನರಿಗೆ ನಿಡುವ ಎಲ್ಲ ಸವಲತ್ತುಗಳನ್ನು ಅರ್ಹ ಲಾನುಭವಿಗಳಿ ವಿತರಿಸಲಾಗಿದೆ. ಇಂದು ತಾಲೂಕಿನಲ್ಲಿ 38,23,918 ರೂ.ಮೊತ್ತದ ಅಗತ್ಯ ಸಲಕರಣೆಗಳನ್ನು ವಿತರಿಸಲಾಗಿದೆ. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಗೇರ್‌ಬೈಲ್‌ನಟರಾಜ್, ಈಚಿಕೆರೆ ಸುಂದರೇಶ್,ಕೆ.ಎ.ಅಬೂಬೇಕರ್, ಎಂ.ಆರ್.ರವಿಶಂಕರ್, ಎಚ್.ಎಂ.ಮನು, ಮಾಳೂರುದಿಣ್ಣೆ ರಮೇಶ್, ಸುನೀಲ್‌ಕುಮಾರ್, ದೇವಂತ್, ರತನ್‌ಗೌಡ, ಎಸ್.ಡಿ.ರಾಜೇಂದ್ರ, ಎಚ್.ಎಂ.ಶಿವಣ್ಣ, ಕರುಗುಂದ ನಂದೀಶ, ನರೇಂದ್ರ, ರಜಿ, ಜೋಸ್ ಮತ್ತಿತರರು ಉಪಸ್ಥಿತರಿದ್ದರು.