

ಹುಬ್ಬಳ್ಳಿ: ಭಾರತ ದೇಶ ನಡೆಯುತ್ತಿರುವುದು ಕುರಾನ, ಬೈಬಲ್, ಭಗವದ್ಗೀತೆ ಮೇಲೆ ಅಲ್ಲ. ಬದಲಿಗೆ ನಮ್ಮದೇ ಆದ ಸಂವಿಧಾನದ ಮೇಲೆ ಎಂದು ಐಟಿ -ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಾಖ್ಯಾನಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಹಿಂದುತ್ವದ ಸರ್ಕಾರವಿತ್ತು. ಯಾರು ಏನೇ ಅಂದರೂ ಈಗೀರುವುದು ಸಂವಿಧಾನದ ಸರ್ಕಾರ. ಸರ್ಕಾರಗಳು ನಡೆಯುವುದು ಸರ್ಕಾರದ ಮೇಲೆ, ಬಸವ ತತ್ವ, ಅಂಬೇಡ್ಕರ್ ತತ್ವದ ಮೇಲೆ. ಸಭಾಧ್ಯಕ್ಷರ ಪೀಠದ ಮೇಲಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾನು ಆರ್‌ಎಸ್‌ಎಸ್‌ನವನು ಎಂದಿದ್ದನ್ನು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಯತೀಂದ್ರ ಅವರನ್ನು ಶ್ಯಾಡೋ ಸಿಎಂ ಎಂದಿದ್ದಾರೆ. ಕಳೆದ ಸರ್ಕಾರದಲ್ಲಿ ಶ್ಯಾಡೋ ಸಿಎಂ ಯಾರಿದ್ದರು? ಯತ್ನಾಳ ಅವರು ದಾಖಲೆ ಬಿಡುಗಡೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಯತ್ನಾಳ ಅವರಲ್ಲಿ ನಾನು ಕರ್ನಾಟಕ ಜನರ ಪರ ಮನವಿ ಮಾಡುತ್ತೇನೆ. ನೀವು ದಾಖಲೆ ಕೊಡಿ. ನೀವು ಪ್ರಾಮಾಣಿಕರು ಎನ್ನುವುದು ಗೊತ್ತಿದೆ. ಯಾವುದೇ ದಾಖಲೆ ಇದ್ದರೂ ನಾವು ಜಸ್ಟೀಸ್ ಮೈಕಲ್ ಕುನೋ ಅವರ ಸಮಿತಿಗೆ ಕೊಡಿ. ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದ್ದಾರೆ. 40 ಸಾವಿರ ಕೋಟಿ ರೂ. ಹಗರಣ ಮಾಡಿದ್ದಾರೆ ಎಂದರೆ ಅದು ಮನುಷ್ಯತ್ವ ಅಲ್ಲ. ಇದು ಕಾಂಗ್ರೆಸ್ ನಾಯಕರ ಆರೋಪ ಅಲ್ಲ. ಮಾಜಿ ಕೇಂದ್ರ ಸಚಿವ, ಹಾಲಿ ಶಾಸಕರ ಆರೋಪ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಉತ್ತರ ಕೊಡಬೇಕು. ಕೋವಿಡ್ ಭ್ರಷ್ಟಾಚಾರದಲ್ಲಿ ಕೇಂದ್ರಕ್ಕೂ ಪಾಲು ಹೋಗಿರಬಹುದು. 40 ಪಸೆರ್ಂಟ್ ಸರ್ಕಾರ ಬಿರುದು ಬಂದಿರುವುದು ಬಿಜೆಪಿಯಿಂದ. ಕೇಂದ್ರ ಹಾಗೂ ರಾಜ್ಯ ನಾಯಕರಿಗೂ ಪಾಲು ಹೋಗಿದೆ ಎಂದು ಸಂಶಯಿಸಿದರು.
ಕ್ಷಮಾ ಪತ್ರ ಬರೆದಿದ್ದು ಯಾರು? ಬ್ರಿಟೀಷರ ಬಳಿ ಪಿಂಚಣಿ ತೆಗೆದುಕೊಂಡಿದ್ದು ಯಾರು? ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸ್ವಂತ ಇತಿಹಾಸವಿಲ್ಲ. ಸ್ವಾತಂತ್ರೃ ಹೋರಾಟದಲ್ಲಿ ಅವರ ಕೊಡುಗೆ ಇಲ್ಲ. ಅವರು ಸೃಷ್ಟಿಸಬೇಕಾಗಿದೆ. ಹಾಗಾಗಿ ವಾಟ್ಸ್ ಆ್ಯಪ್ ಯುನಿರ್ವಸಿಟಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಯುವಕರು ಇದನ್ನು ನಂಬುತ್ತಾರೆ. ಬ್ರಿಟೀಷರ ಬೂಟು ನೆಕ್ಕೋರು ಎನ್ನು ಬಿ.ಕೆ. ಹರಿಪ್ರಸಾದ ಅವರ ಹೇಳಿಕೆ ಸಮರ್ಥಿಸಿ ಪ್ರಿಯಾಂಕ್ ಹೀಗೆ ವಿವರಿಸಿದರು.
ಬಿಜೆಪಿಯವರು ಜನಿಸಿರುವುದು ಇತ್ತೀಚೆಗೆ. ಇವಾರ ಯಾರ‌್ಯಾರು ಬಿಜೆಪಿ ಶಾಸಕರು, ಸಂಸದರಿದ್ದಾರೋ ಅವರ ಪೂರ್ವಜರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಸಾವರಕರ್‌ಗೆ ಹೇಗೆ ವೀರ ಎನ್ನುವ ಬಿರುದು ಬಂತು. ಇದಕ್ಕೆಲ್ಲ ಉತ್ತರ ಕೊಡಲ್ಲ ಎಂದು ಇತಿಹಾಸ ಹೇಳಿದರು.