ಆಡಳಿತಾಧಿಕಾರಿ ನೇಮಕ ತಡೆ ಹಿಡಿದ ಸರ್ಕಾರ

3 Dwd 1
Published on

ಧಾರವಾಡ: ಇಲ್ಲಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಗೆ ಆಡಳಿತಾಧಿಕಾರಿಯ ನೇಮಕ ಆದೇಶವನ್ನು ಸರ್ಕಾರ ತಡೆಹಿಡಿದಿದೆ.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಆಡಳಿತಾಧಿಕಾರಿ ನೇಮಕ ಪ್ರಕರಣ ಹೈಕೋರ್ಟ್ನಲ್ಲಿ ಬಾಕಿ ಇರುವ ಕಾರಣ ರಾಜ್ಯ ಸರ್ಕಾರ ಡಿ. 28ರಂದು ಹೊರಡಿಸಿದ್ದ ಆದೇಶವನ್ನು ತಡೆಹಿಡಿದಿದೆ. ರಾಜ್ಯ ಸರ್ಕಾರದ ಸಹಕಾರ ಇಲಾಖೆ ಅಽÃನ ಕಾರ್ಯದರ್ಶಿ ರಂಗನಾಥ ಜಿ. ಈ ಆದೇಶ ಹೊರಡಿಸಿದ್ದಾರೆ.
ಹಿಂದಿ ಪ್ರಚಾರ ಸಭಾಕ್ಕೆ 2020ರಲ್ಲಿ ಆಡಳಿತಾಧಿಕಾರಿ ಚುನಾವಣೆ ನಡೆಸುವಂತೆ ಆದೇಶವಾಗಿತ್ತು. ಆದರೆ, ಸಹಕಾರ ಸಂಘಗಳ ಉಪ ನಿಯಮದ ವಿರುದ್ಧ ಚುನಾವಣೆ ನಡೆಸಿ ಈರೇಶ ಅಂಚಟಗೇರಿ ಅಧ್ಯಕ್ಷರಾಗಿದ್ದಾರೆ ಎಂದು ರಾಯಪ್ಪ ಬಾಳಪ್ಪ ಪುಡಕಲಕಟ್ಟಿ, ಮಲ್ಲಪ್ಪ ಪುಡಕಲಕಟ್ಟಿ, ಇತರರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೇ ವಿಷಯವಾಗಿ ನ್ಯಾಯಾಲಯದ ಮೊರೆ ಕೂಡ ಹೋಗಿದ್ದರು. ಆಡಳಿತ ಮಂಡಳಿಗೆ ಚುನಾವಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿತ್ತು. ಚುನಾವಣಾ ನಿಯಮಾವಳಿ ಉಲ್ಲಂಘಿಸಲಾಗಿದೆ ಎಂದು ಹಿಂದಿನ ಆಡಳಿತ ಮಂಡಳಿಯ ರಾಯಪ್ಪ ಪುಡಕಲಕಟ್ಟಿ ಹಾಗೂ ಮಲ್ಲಪ್ಪ ಪುಡಕಲಕಟ್ಟಿ ಸರ್ಕಾರದ ಮೊರೆ ಹೋಗಿದ್ದರು. ಸರ್ಕಾರ ಈ ಬಗ್ಗೆ ಪರಿಶೀಲನಾತ್ಮಕ ವರದಿ ನೀಡುವಂತೆ ಸಹಕಾರ ಸಂಘಗಳ ಧಾರವಾಡ ಉಪ ನಿಬಂಧಕರಿಗೆ ಆದೇಶಿಸಿತ್ತು. ಉಪ ನಿಬಂಧಕರು ನೀಡಿದ ವರದಿಯಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ೧೯೬೦ರ ಕಲಂ ೨೭ಎ ಅನ್ವಯ ಸಭಾಕ್ಕೆ ನಿಯಮಬದ್ಧವಾಗಿ ಆಡಳಿತ ಮಂಡಳಿ ನೇಮಕವಾಗಿಲ್ಲ ಎಂದು ಪರಿಗಣಿಸಿತ್ತು. ಹೀಗಾಗಿ ಮುಂದಿನ 6 ತಿಂಗಳವರೆಗೆ ಧಾರವಾಡ ಉಪ ವಿಭಾಗಾಧಿಕಾರಿ ಶಾಲಂ ಹುಸೇನ್ ಅವರನ್ನು ಸಭಾದ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಸಹಕಾರ ಇಲಾಖೆಯ ಅಽÃನ ಕಾರ್ಯದರ್ಶಿ 2023ರ ಡಿ. ೨೮ರಂದು ಆದೇಶಿಸಿದ್ದರು. ಸರ್ಕಾರದ ಆದೇಶದ ಅನ್ವಯ ಉಪ ವಿಭಾಗಾಽಕಾರಿ ಶಾಲಂ ಹುಸೇನ್ ಸಭಾದ ಆಡಳಿತಾಧಿಕಾರಿಯಾಗಿ ಡಿ. ೨೯ರಂದು ಅಽಕಾರ ವಹಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net