ರೈತರನ್ನು ಕಡೆಗಣಿಸಿದೆ ಸರ್ಕಾರ

12BLH1
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಬೈಲಹೊಂಗಲ: ಸರ್ಕಾರ ಗ್ಯಾರಂಟಿ ಯೋಜನೆ ನೀಡುವ ಅಬ್ಬರದಲ್ಲಿ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ರಾಜ್ಯ ನೇಗಿಲಯೋಗಿ ರೈತ ಸೇವಾ ಸಂಘದ ಅಧ್ಯಕ್ಷ ರವಿ ಪಾಟೀಲ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ನೇಗಿಲಯೋಗಿ ರೈತ ಸೇವಾ ಸಂಘದ ವಿವಿಧ ತಾಲೂಕಾಧ್ಯಕ್ಷರ ನೇಮಕ ಸಮಾರಂಭದಲ್ಲಿ ಮಾತನಾಡಿದರು. ಸರ್ಕಾರ ಸರಿಯಾದ ಸೌಲಭ್ಯ ನೀಡದೇ ಸತಾಯಿಸುತ್ತಿದೆ. ಕಳಸಾ ಬಂಡೂರಿ ಯೋಜನೆ ಬೇಗನೆ ಜಾರಿಯಾಗಬೇಕು. ಗುಜರಾತ ಮಾದರಿಯಲ್ಲಿ ಎಫ್‌ಆರ್‌ಪಿಯಂತೆ ಪ್ರತಿ ಟನ್‌ಗೆ 4,500 ರೂ.ಗೆ ಏರಿಕೆ ಮಾಡಬೇಕು. ಕಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಮಾನದಂಡ ಕೈಬಿಡಬೇಕು. ಅನ್ನಭಾಗ್ಯಕ್ಕೆ ರಾಜ್ಯದ ರೈತರು ಬೆಳೆದ ಧಾನ್ಯಗಳನ್ನೇ ಖರೀದಿಸಿ ವಿತರಿಸಬೇಕು ಎಂದರು.

ಜಿಲ್ಲಾಧ್ಯಕ್ಷ ಶಂಕರ ಬೋಳಣ್ಣವರ ಮಾತನಾಡಿ, ಬೆಳೆ ವಿಮಾ ಯೋಜನೆ ಪ್ರತಿ ರೈತರಿಗೂ ಮುಟ್ಟಬೇಕು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ಕೂಡಲೇ ಅನುಷ್ಠಾನ ಆಗಬೇಕು. ಎಲ್ಲ ಕಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸೋಮಲಿಂಗಪ್ಪ ಮೆಳ್ಳಿಕೇರಿ (ಬೈಲಹೊಂಗಲ), ನಾಗನಗೌಡ ಪಾಟೀಲ (ಬೆಳಗಾವಿ), ವೀರಭದ್ರಪ್ಪ ತುರಮರಿ (ಚನ್ನಮ್ಮನ ಕಿತ್ತೂರು), ಮನೋಹರ ಸುಳ್ಳೇಭಾಂವಿಕರ(ಖಾನಾಪುರ) ಅವರನ್ನು ಆಯಾ ತಾಲೂಕಾಧ್ಯಕ್ಷರನ್ನಾಗಿ ನೇಮಿಸಿ ಆದೇಶಪತ್ರ ನೀಡಲಾಯಿತು. ಜಗದೀಶ ಬೋಳಣ್ಣವರ, ಮಹಾಂತೇಶ ಬೋಳಣ್ಣವರ, ಅನಿಲ ಗೀರನವರ, ಬಸವರಾಜ ಜಂಬಗಿ, ಅದಶ್ಯಪ್ಪ ಹುಚ್ಚನವರ, ಬಾಬು ಸಂಗೊಳ್ಳಿ, ಮಹೇಶ ಬೋಳಣ್ಣವರ, ಇನೂಸ್ ಬಡೇಗರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net