ಫೇಸ್​ಬುಕ್ ಬಂದ್ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ

Joshi 786
Published on

ಹುಬ್ಬಳ್ಳಿ : ರಾಜ್ಯದಲ್ಲಿ ಹಿಂದು ವಿರೋಧಿ ಸರ್ಕಾರ ಇದೆ. ಹಾಗಾಗಿ, ಶ್ರೀರಾಮ ಸೇನಾ ಮುಖಂಡರ ಫೇಸ್​ಬುಕ್ ಖಾತೆಗಳನ್ನು ಬ್ಲಾಕ್ ಮಾಡುವ ಪ್ರಯತ್ನಗಳೂ ನಡೆದಿರಬಹುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶಂಕೆ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶ್ರೀರಾಮ ಸೇನಾ ಮುಖಂಡರ ಫೇಸ್​ಬುಕ್ ಖಾತೆಗಳನ್ನು ಬಂದ್ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದರು.

ಸುಖಾಸುಮ್ಮನೇ ಫೇಸ್​ಬುಕ್ ಖಾತೆಗಳನ್ನು ಬ್ಲಾಕ್ ಮಾಡಲು ಬರುವುದಿಲ್ಲ. ಹಾಗೊಂದು ವೇಳೆ ಮಾಡಿದ್ದರೂ, ಅದು ತಪು್ಪ. ಈ ರೀತಿಯ ಧೋರಣೆ ಸರಿ ಅಲ್ಲ ಎಂದು ಹೇಳಿದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net