ಸರ್ಕಾರಿಂದ ಅಂಗವಿಕಲರಿಗೆ ಸದಾ ಪ್ರೋತ್ಸಾಹ

h4-abbayya
filter: 0; fileterIntensity: 0.0; filterMask: 0; captureOrientation: 0; module: video; hw-remosaic: false; touch: (-1.0, -1.0); modeInfo: Beauty ; sceneMode: 0; cct_value: 5656; AI_Scene: (-1, -1); aec_lux: 139.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 43;
Published on

ಹುಬ್ಬಳ್ಳಿ: ಅಂಗವಿಕಲರು ತಮ್ಮ ನ್ಯೂನ್ಯತೆ ಮರೆತು ಸಾಧನೆ ಮಾಡಬೇಕು. ಸಾಧನೆಗೆ ಅಗತ್ಯ ಪ್ರೋತ್ಸಾಹ ನಮ್ಮ ಸರ್ಕಾರದಿಂದ ಸದಾ ಇರಲಿದೆ ಎಂದು ಶಾಸಕ, ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ತಿಳಿಸಿದರು.

ಇಲ್ಲಿಯ ಮಂಗಳವಾರಪೇಟೆಯ ರುದ್ರಾಕ್ಷಿಮಠದ ಆವರಣದಲ್ಲಿ ಶಾಸಕರ ವಿಶೇಷ ಅನುದಾದಡಿ 26 ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರವಾಹನಗಳನ್ನು ಗುರುವಾರ ವಿತರಿಸಿ ಅವರು ಮಾತನಾಡಿದರು.

ಅಂಗವಿಕಲರಿಗೆ ಅನುಕೂಲ ಕಲ್ಪಿಸಲು ಈ ಸೌಲಭ್ಯ ಒದಗಿಸಲಾಗುತ್ತಿದೆ. ಸರ್ಕಾರದ ಸೌಲಭ್ಯ ಪಡೆದು ಸ್ವಾಭಿಮಾನದ ಬದುಕು ಕಂಡುಕೊಳ್ಳಬೇಕು ಎಂದರು.

ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ರಾಯನಾಳದ ಶ್ರೀ ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಮಹಾಂತೇಶ ಕುರ್ತಕೋಟಿ, ಪಾಲಿಕೆ ಸದಸ್ಯರಾದ ಮಂಜುಳಾ ಶಾಮಜಾಧವ, ಶ್ರೀನಿವಾಸ ಬೆಳದಡಿ, ಆರೀಫ್ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಹಮೂದ್ ಕೋಳೂರು, ಚೇತನಾ ಲಿಂಗದಾಳ, ಮುಖಂಡರಾದ ಅಲ್ತಾಫ್ ಕಿತ್ತೂರು, ವಿಜಯಕುಮಾರ ಕುಂದನಹಳ್ಳಿ, ರಜನಿಕಾಂತ ಬಿಜವಾಡ, ಯಲ್ಲಪ್ಪ ಮಡಿವಾಳ, ಗಂಗಾಧರ ದೊಡ್ಡವಾಡ, ಬಸವರಾಜ ಕುಸುಗಲ್, ಗಿರೀಶ ಸುಂಕದ, ಶರೀಫ್ ಅದ್ವಾನಿ, ಚೈತನ್ಯ ಬಿಜವಾಡ, ರವಿಕುಮಾರ ಮಾನಶೆಟ್ಟರ, ಸಿದ್ದೇಶ್ವರ ಬಂಕಾಪೂರ, ಸಂತೋಷ ಪೂಜಾರ, ಕಾಶಪ್ಪ ಬಿಜವಾಡ, ಯಲ್ಲಪ್ಪ ಮೆಹರವಾಡೆ, ಅಕ್ಬರ್ ಅಂಗಡಿ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net