

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಂಬಳ ಕ್ಷೇತ್ರದಲ್ಲಿ ಮಿಂಚಿನ ಓಟದ ಮೂಲಕ ಅಸಂಖ್ಯಾತ ಅಭಿವಾನಿ ಬಳಗ ಹೊಂದಿದ್ದ ಕೊಳಚೂರು ಕೊಂಡೆಟ್ಟು ಸುಕುವಾರ ಶೆಟ್ಟಿ ಅವರ ಕೋಣ ಚೆನ್ನ(27) ವಯೋಸಹಜವಾಗಿ ಗುರುವಾರ ಕೊಳಚೂರಿನಲ್ಲಿ ಇಹಲೋಕ ತ್ಯಜಿಸಿತು.
ನಿರಂತರ ಐದು ವರ್ಷ ಸರಣಿ ಶ್ರೇಷ್ಠ ಗೌರವ ಪಡೆದು, 13 ವರ್ಷದಲ್ಲಿ 150ಕ್ಕೂ ಅಧಿಕ ಚಿನ್ನದ ಪದಕ ಗೆದ್ದು ಮಹತ್ತರ ಸಾಧನೆ ವಾಡಿತ್ತು. ಕಂಬಳ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಕ್ರೀಡಾರತ್ನ ಪುರಸ್ಕಾರ ಲಭಿಸಲು ಕೂಡ ಈ ಕೋಣ ಕಾರಣವಾಗಿತ್ತು. 2020ರ ಅಡ್ವೆ ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಓಟ ಕೊನೆಗೊಳಿಸಿದ ಬಳಿಕ 3 ಕಂಬಳಗಳಲ್ಲಿ ನೇಗಿಲು ವಿಭಾಗದಲ್ಲಿ ಸ್ಪರ್ಧಿಸಿ ಕಳೆದ 3 ವರ್ಷಗಳಿಂದ ಕೊಳಚೂರಿನಲ್ಲಿ ವಿಶ್ರಾಂತಿಯಲ್ಲಿತ್ತು.
ಮೊದಲ ಸ್ಪರ್ಧೆಯಲ್ಲೇ ಮಿಂಚಿಂಗ್: ನಾಲ್ಕು ವರ್ಷದ ಪ್ರಾಯದಲ್ಲಿ ಕಂಬಳ ಸ್ಪರ್ಧೆಗೆ ಎಂಟ್ರಿ ಕೊಟ್ಟಿದ್ದ ಚೆನ್ನ ತನ್ನ ಮೊದಲ ಸ್ಪರ್ಧೆಯಲ್ಲೇ ಸೆಮಿೈನಲ್ಗೆ ತಲುಪಿ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಯಾರ ಹೆಸರಿನಲ್ಲಿ ಓಡಿಸಿದರೂ ಅವರಿಗೆ ಒಂದು ಪದಕ ಗೆದ್ದು ಕೊಡುವುದನ್ನು ಮರೆಯದ ಚೆನ್ನ, ಅಬಾಲ ವೃದ್ಧರಾದಿಯಾಗಿ ಅಸಂಖ್ಯಾತ ಅಭಿವಾನಿಗಳನ್ನು ಹೊಂದಿತ್ತು.
ಸಾಧು ಸ್ವಭಾವದ ಚೆನ್ನ ಕಂಬಳದ ದಿನ ಹಟ್ಟಿಯಿಂದ ಹೊರಬಂದು ಮನೆಯ ತುಳಸಿ ಕಟ್ಟೆಗೆ ಪ್ರದಕ್ಷಿಣೆ ಬಂದು ತಾನು ಸಾಗುವ ವಾಹನವನ್ನೇರಿ ಮಲಗಿ ಬಿಡುವ ಬುದ್ಧಿ ಹೊಂದಿದ್ದ.
ಚಿನ್ನದ ಬೇಟೆಯ ಚೆನ್ನ: ತನ್ನೊಂದಿಗೆ ಜೋಡಿಯಾದ ಕೋಣದ ಜತೆ 2004ರಿಂದ 2009ರವರೆಗೆ ನೇಗಿಲು ಕಿರಿಯ, ಹಿರಿಯ ಹಾಗೂ ಹಗ್ಗ ಹಿರಿಯ ವಿಭಾಗಗಳಲ್ಲಿ ಚಿನ್ನದ ಬೇಟೆ ಮೂಲಕ ಸತತ ಐದು ವರ್ಷ ತನ್ನ ಯಜವಾನರಿಗೆ ಸರಣಿಶ್ರೇಷ್ಠ ಗೌರವ ತಂದುಕೊಡುವಲ್ಲಿ ಯಶಸ್ವಿಯಾಗಿತ್ತು. ಚೆನ್ನನ ಸಾಧನೆಗೆ ಅಭಿಮಾನಿಗಳು ಹಲವು ಕಡೆ ಸನ್ಮಾನಿಸಿದ್ದರು.
ಕೋಣದ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಳಗ್ಗಿನಿಂದಲೇ ಅಭಿವಾನಿಗಳು ಆಗಮಿಸಿ ಅಂತಿಮ ದರ್ಶನ ಪಡೆದರು. ಅವಿಭಜಿತ ಜಿಲ್ಲಾ ಕಂಬಳ ಸಮಿತಿ ಪದಾಧಿಕಾರಿಗಳು ಹಾಗೂ ಕಂಬಳಾಭಿವಾನಿಗಳು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.