ಡಿ.21ಕ್ಕೆ ‘ದಿ ಗೋಲ್ಡನ್ ಚಾರಿಯೇಟ್’ ರೈಲು ಪುನಾರಂಭ

golden chariot
Published on

ಬೆಂಗಳೂರು: ದಕ್ಷಿಣ ಭಾರತದ ಏಕೈಕ ಐಷರಾಮಿ ರೈಲು ‘ದಿ ಗೋಲ್ಡನ್ ಚಾರಿಯೇಟ್’ ಅನ್ನು ಭಾರತೀಯ ರೈಲ್ವೆ ಆತಿಥ್ಯ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ ) ನಿರ್ವಹಣೆ ಮಾಡುತ್ತಿದ್ದು, ಡಿ.21ರಿಂದ ಬೆಂಗಳೂರಿನಿಂದ ಪ್ರವಾಸದ ರೈಲಿಗೆ ಹಸಿರು ನಿಶಾನೆ ತೋರಿಸಲಾಗುತ್ತದೆ.

2024-25ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರವಾಸ ಕಾರ್ಯಕ್ರಮಗಳು ಹೆಚ್ಚಿರುವುದರಿಂದ ಕರ್ನಾಟಕದ ಪ್ರವಾಸಿ ತಾಣಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದು ಸೂಕ್ತವಾಗಿರುವ ಹಿನ್ನೆಲೆಯಲ್ಲಿ ಈ ವಿಶೇಷ ರೈಲನ್ನು ಪುನಾರಂಭಿಸಲಾಗಿದೆ. ಈ ರೈಲು ಬೆಂಗಳೂರಿನಿಂದ ಹೊರಟು, ಮೈಸೂರು, ಕಾಂಚಿಪುರಂ, ಮಹಾಬಲಿಪುರಂ, ತಂಜಾವೂರು, ಚೆಟ್ಟಿನಾಡು, ಕೊಚ್ಚಿನ್, ಚೆಡರ್ತಲ / ಮರೈಕುಲಂ, ಬೆಂಗಳೂರು ಮಾರ್ಗವಾಗಿ ಸಂಚಾರ ಪ್ರಾರಂಭಿಸಲಿದೆ.

ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಸಮ್ಮುಖದಲ್ಲಿ ಯಶವಂತಪುರ (ಜಂಕ್ಷನ್) ರೈಲು ನಿಲ್ದಾಣದ ಫ್ಲಾಟ್ ಫಾರಂ 6ರಲ್ಲಿ ಡಿ.21ರ ಬೆಳಿಗ್ಗೆ 9.30ಕ್ಕೆ ದಿ ಗೋಲ್ಡನ್ ಚಾರಿಯೇಟ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net