ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳವು

Doddapete police station
ಶಿವಮೊಗ್ಗ ದೊಡ್ಡಪೇಟೆ ಠಾಣೆ
Published on

ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಕರಿಮಣಿ ಮತ್ತು ತಾಳಿಗುಂಡು ಇರುವ ಸರ ಸೇರಿ 20 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಶಿಕಾರಿಪುರ ನೆಲವಾಗಿಲು ಗ್ರಾಮದ 28 ವರ್ಷದ ಮಹಿಳೆ ಚಿನ್ನಾಭರಣ ಕಳೆದುಕೊಂಡವರು. ಶಿವಮೊಗ್ಗ ಹೊರವಲಯದ ರಾಮೇನಕೊಪ್ಪದ ತವರು ಮನೆಗೆ ಬಂದಿದ್ದ ಮಹಿಳೆ ನೆಲವಾಗಿಲು ಗ್ರಾಮಕ್ಕೆ ವಾಪಸ್ ಹೋಗಲು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಧರ್ಮಸ್ಥಳ-ಹುಬ್ಬಳ್ಳಿ ಕಡೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು.
ತುಂಬ ಜನರಿದ್ದ ಕಾರಣ ಸೀಟು ಹಿಡಿಯಲು ಮುಂದಾದ ಮಹಿಳೆ, ಸೀಟು ಹಿಡಿದ ನಂತರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಆಧಾರ್ ಕಾರ್ಡ್ ತೆಗೆಯಲು ಬ್ಯಾಗ್ ಜಿಪ್ ತೆರೆದಾಗ ಚಿನ್ನಾಭರಣ ಮತ್ತು ಹಲವು ಕಾರ್ಡ್‌ಗಳು ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ. ಕರಿಮಣಿ ಮತ್ತು ತಾಳಿಗುಂಡು ಇರುವ ತಾಳಿ ಸರ, ಈಶ್ವರನ ಡಾಲರ್, ಕೆನರಾ ಮತ್ತು ಇಂಡಿಯನ್ ಬ್ಯಾಂಕ್‌ನ ಎಟಿಎಂ ಕಾರ್ಡ್‌ಗಳು, ಪಾನ್ ಕಾರ್ಡ್ ಕಳವಾಗಿವೆ. ಈ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net