ಆದರ್ಶ ಬೆಳೆಸಿ ಉತ್ತೇಜಿಸುವುದೇ ರೋಟರಿ ಸಂಸ್ಥೆ ಗುರಿ

30 yelandur 03
ಯಳಂದೂರು ಅಗ್ರಹಾರ ಬೀದಿಯ ಶ್ರೀ ಶಂಕರ ಸಭಾ ಭವನದಲ್ಲಿ ಶುಕ್ರವಾರ ರೋಟರಿ ಗ್ರೀನ್‌ವೇ ಸಂಸ್ಥೆಯಿಂದ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ರೋಟರಿ ನಾಯಕತ್ವ ಸಂಸ್ಥೆ 3181ರ ಕಾರ್ಯರ್ಶಿ ಎಚ್.ಎಂ. ಹರೀಶ್ ಮಾತನಾಡಿದರು.
Published on

ಯಳಂದೂರು: ಸೇವೆಯ ಅಮೂಲ್ಯ ಕಾರ್ಯ, ಆದರ್ಶಗಳನ್ನು ಬೆಳೆಸಿ ಉತ್ತೇಜಿಸುವುದೇ ರೋಟರಿ ಸಂಸ್ಥೆ ಗುರಿಯಾಗಿದೆ ಎಂದು ರೋಟರಿ ನಾಯಕತ್ವ ಸಂಸ್ಥೆ 3181ರ ಕಾರ್ಯರ್ಶಿ ಎಚ್.ಎಂ. ಹರೀಶ್ ಹೇಳಿದರು.

ಪಟ್ಟಣದ ಅಗ್ರಹಾರ ಬೀದಿಯ ಶ್ರೀ ಶಂಕರ ಸಭಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯಳಂದೂರು ರೋಟರಿ ಗ್ರೀನ್‌ವೇ ಸಂಸ್ಥೆಯ ಸದಸ್ಯರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ರೋಟರಿ ಸಂಸ್ಥೆ ಒಂದು ಕುಟುಂಬವಾಗಿದೆ. ಇಲ್ಲಿರುವ ಪ್ರತಿ ಸದಸ್ಯರೂ ಸೇವಾ ಮನೋಭಾವನೆಯಿಂದಲೇ ಕೆಲಸವನ್ನು ಮಾಡಬೇಕು. ಸಂಸ್ಥೆ ಇಡೀ ವಿಶ್ವದ ಅನೇಕ ದೇಶಗಳಲ್ಲಿದೆ. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಂಸ್ಥೆ ಮಿಲಿಯನ್ ಗಟ್ಟಲೆ ಡಾಲರ್ ಹಣವನ್ನು ನೀಡುತ್ತಿದೆ. ನಾವು ಈ ಮಾರ್ಗದಲ್ಲೇ ಸಾಗಬೇಕು. ಸರ್ಕಾರಿ ಶಾಲೆ, ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ, ಪರಿಕರಗಳು, ಲೇಖನ, ಪಠ್ಯ ಸಾಮಗ್ರಿಗಳು ಸೇರಿದಂತೆ ಅವಶ್ಯಕತೆ ಇರುವ ವಸ್ತುಗಳನ್ನು ನಿಸ್ವಾರ್ಥ ಸೇವೆ ಎಂದು ಪರಿಗಣಿಸಿ ನೀಡಬೇಕು ಎಂದು ಸಲಹೆ ನೀಡಿದರು.

ರೋಟರಿ ಗ್ರೀನ್‌ವೇ ತಾಲೂಕು ಅಧ್ಯಕ್ಷ ವೈ.ಜಿ.ನಿರಂಜನಸ್ವಾಮಿ, ಕಾರ್ಯದರ್ಶಿ ಪುಟ್ಟರಾಜು, ಸದಸ್ಯರಾದ ರುದ್ರಯ್ಯ, ಡಾ. ಸಾಗರ್, ಶಿವಕುಮಾರ್, ಗೌಡಹಳ್ಳಿ ರವಿ, ವೈ.ಕೆ.ಮೋಳೆ ನಾಗರಾಜು, ಬಂಗಾರಸ್ವಾಮಿ, ನಟರಾಜು, ರಿತೀಶ್, ಬಿ.ಟಿ.ಶ್ರೀನಿವಾಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net