

ವಿಜಯವಾಣಿ ಸುದ್ದಿಜಾಲ ಧಾರವಾಡ
ಸರ್ವಜನರ ಹಿತ ಸಾಧನೆಯೇ ಸಮಾಜವಾದದ ಗುರಿ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ನೀತಿ ಸಮಾಜವಾದದ್ದಾಗಿದೆ ಎಂದು ಪತ್ರಕರ್ತ ಪುಂಡಲೀಕ ಹಡಪದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ರಾಚಪ್ಪ ಹಡಪದ ದತ್ತಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಸ್ತುತ ರಾಜಕೀಯ ಹಾಗೂ ಸಮಾಜವಾದ ಕುರಿತು ಉಪನ್ಯಾಸ ನೀಡಿದರು.
19ನೇ ಶತಮಾನದಲ್ಲಿ ಶ್ರಮಜೀವಿ ವರ್ಗದ ಮಹಾನ್ ನಾಯಕ ಕಾರ್ಲಮಾರ್ಕ್ಸ ಶೋಷಣೆ ರಹಿತ, ವರ್ಗ ರಹಿತ ನವ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಶೋಷಿತ ವರ್ಗ ನತೆಯಿಂದ ಜೀವನ ನಡೆಸಬೇಕೆಂಬ ಸಿದ್ಧಾಂತ ಉಳ್ಳವರಾಗಿದ್ದರು ಎಂದರು.
ಚಿತ್ರಕಲಾವಿದ ಬಿ. ಮಾರುತಿ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಶದಲ್ಲಿ ಜಾತಿಯತೆ ಎಂಬುದು ಅಭಿವೃದ್ಧಿಗೆ ಮಾರಕವಾಗಿದೆ. ರಾಚಪ್ಪ ಹಡಪದ ಎಲ್ಲ ಜಾತಿಯವರನ್ನು ಸಮಾನವಾಗಿ ಕಂಡವರು. ಬಸವಾದಿ ಶರಣರ ಕಾಯಕ ಹಾಗೂ ಸಮಾನತೆ ತತ್ವದಂತೆ ಬದುಕಿ, ತಮ್ಮ ಸತ್ಯ ಶುದ್ಧ ಕಾಯಕದ ಜತೆಗೆ ಸಮಾಜ ಸೇವೆ ಮಾಡಿದವರು ಎಂದರು.
ಸಂದ ಅಧ್ಯ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ರವಿರಾಜ ಹಡಪದ, ಮಲ್ಲಿಕಾರ್ಜುನ ಹಡಪದ, ಸೋಮಣ್ಣ ಹಡಪದ, ಶಾಂತವೇರಿ ಬೆಟಗೇರಿ, ಯೋಗೇಶ ಹಡಪದ, ಇತರರು ಇದ್ದರು.
ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.