ಅನಕ್ಷರತೆಮುಕ್ತ ರಾಜ್ಯ ಮಾಡುವ ಗುರಿ, ಸರ್ಕಾರಿ ಶಿಕ್ಷಕರ ಸಂಘಗಳ ಒಕ್ಕೂಟದ ಅಧ್ಯಕ್ಷ ವಿ.ಟಿ. ವೆಂಕಟೇಶಯ್ಯ ಹೇಳಿಕೆ

12 Nela ph 1 Abhinadane
Published on

ನೆಲಮಂಗಲ: ಅನಕ್ಷರತೆಮುಕ್ತ ರಾಜ್ಯ ನಿರ್ಮಿಸಲು ಎಜುಕೇಷನ್ ಹೆಲ್ಪ್-ಲೈನ್ ಹೆಸರಲ್ಲಿ ಬೃಹತ್ ಆಂದೋಲನ ಹಮ್ಮಿಕೊಂಡಿರುವುದಾಗಿ ರಾಜ್ಯ ಸರ್ಕಾರಿ ಶಿಕ್ಷಕರ ಸಂಘಗಳ ಒಕ್ಕೂಟ ಅಧ್ಯಕ್ಷ ವಿ.ಟಿ. ವೆಂಕಟೇಶಯ್ಯ ಹೇಳಿದರು.

ರಾಜ್ಯ ಸರ್ಕಾರಿ ಶಿಕ್ಷಕರ ಸಂಘಗಳ ಒಕ್ಕೂಟ ಹಾಗೂ ತಾಲೂಕು ಎಸ್‌ಸಿ, ಎಸ್ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಎಜುಕೇಷನ್ ಹೆಲ್ಪ್-ಲೈನ್ ಬೃಹತ್ ಆಂದೋಲನಾ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲೆ ಬಿಟ್ಟಿರುವ 7ರಿಂದ 14 ವರ್ಷದ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಈ ಬೃಹತ್ ಆಂದೋಲನದ ಉದ್ದೇಶವಾಗಿದೆ ಎಂದರು.

ರಾಜ್ಯದ ಎಲ್ಲ ತಾಲೂಕುಗಳಲ್ಲೂ ಈ ಆಂದೋಲನ ಆರಂಭಿಸಲಾಗಿದೆ. ತಾಲೂಕಿನಲ್ಲಿ ಆಂದೋಲನಕ್ಕೆ ಆಯ್ದ ನಾಲ್ವರು ಶಿಕ್ಷಕರನ್ನು ಸಂಯೋಜರಾಗಿ ನೇಮಿಸಲಾಗುವುದು. ಪ್ರತಿ ಹೋಬಳಿಯಲ್ಲಿ ತಲಾ 5 ಮಹಿಳೆಯರು ಮತ್ತು 5 ಪುರುಷ ಪದವೀಧರ ನಿರುದ್ಯೋಗಿಗ ಪಟ್ಟಿಯನ್ನು ಸಂಯೋಜಕರು ಸಿದ್ಧಪಡಿಸಬೇಕು. ಆಯ್ಕೆಯಾದ 50 ಮಂದಿ ಪದವೀಧರರಿಗೆ ತರಬೇತಿ ನೀಡಲಿದ್ದು, ಶಾಲೆ ಬಿಟ್ಟ ಮಕ್ಕಳ ಮಾಹಿತಿಯನ್ನು ಹೋಬಳಿವಾರು ಸಂಗ್ರಹಿಸಿ ಬಿಇಒಗೆ ಕೊಡಲಿದ್ದಾರೆ ಎಂದು ವಿವರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ರಮೇಶ್, ಎಜುಕೇಷನ್ ಹೆಲ್ಪ್-ಲೈನ್ ಸಂಸ್ಥಾಪಕಿ ಡಾ. ಸುಮಿತ್ರಾ ಮಾರುತಿದುರ್ಗಿ, ಎಸ್‌ಸಿ, ಎಸ್‌ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಪೂಜಗಯ್ಯ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಚ್. ರಾಮಾಂಜಿನಪ್ಪ, ತಾಲೂಕು ಅಧ್ಯಕ್ಷ ಯೋಗಾನಂದ್, ಕಾರ್ಯದರ್ಶಿ ಹುಚ್ಚಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್, ಸರ್ಕಾರಿ ನೌಕರರ ಸಂಘ ತಾಲೂಕು ಅಧ್ಯಕ್ಷ ವಾಸುದೇವಮೂರ್ತಿ, ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷ ಪರಮೇಶ್ವರಯ್ಯ, ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ನಾಗರಾಜುಮೂರ್ತಿ, ಉಪಾಧ್ಯಕ್ಷೆ ಸೌಭಾಗ್ಯ ಇದ್ದರು.

ಕೊರೊನಾ ಸೋಂಕಿನಿಂದ ನಗರ ತೊರೆದಿರುವ ಅಂದಾಜು 7 ಲಕ್ಷಕ್ಕೂ ಹೆಚ್ಚು ಕುಟುಂಬಗಳು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಶಿಕ್ಷಣ ನೀಡಲು ಆಂದೋಲನ ಸಹಕಾರಿಯಾಗಲಿದೆ. ಎಚ್. ವೆಂಕಟೇಶ್ ದೊಡ್ಡೇರಿ, ರಾಜ್ಯ ಎಸ್‌ಸಿ, ಎಸ್‌ಟಿ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net