ವ್ಯಸನಮುಕ್ತ ನಾಡು ಧರ್ಮಸ್ಥಳದ ಗುರಿ

BRM FITNESS 11 (1)
Published on

ಭರಮಸಾಗರ: ವ್ಯಸನಮುಕ್ತ ನಾಡು ಧರ್ಮಸ್ಥಳ ಸಂಸ್ಥೆಯ ಗುರಿ ಆಗಿದ್ದು, ಆ ನಿಟ್ಟಿನಲ್ಲಿ ಡಾ. ಶ್ರೀ ವಿರೇಂದ್ರ ಹೆಗ್ಗಡೆ ಅವರು ವಿವಿಧ ಯೋಜನೆಗಳ ಮೂಲಕ ಶ್ರಮಿಸುತ್ತಿರುವುದು ಮಾದರಿ ಎಂದು ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯೆ ಶಾಂತಾ ಅಶೋಕ್ ಹೇಳಿದರು.

ಧರ್ಮಸ್ಥಳದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಪಟ್ಟಣದ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ದುಶ್ಚಟಗಳಿಂದ ದೂರು ಇರುವಂತೆ ಕಲಿಕಾ ಹಂತದಲ್ಲಿಯೇ ಅವರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆರೋಗ್ಯ ಸಮಾಜ ನಿರ್ಮಾಣಕ್ಕೆ ಸಂಸ್ಥೆ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಹದಿ ಹರೆಯದಲ್ಲಿ ಮಕ್ಕಳು ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಅಪರಿಚಿತರ ಜತೆ ಆತ್ಮೀಯ ವರ್ತನೆ ಸಲ್ಲದು. ಬೀದಿ ಬದಿ ತಿಂಡಿ-ತಿನಿಸು-ಪಾನಿಯಗಳನ್ನು ಸೇವನೆ ಮಾಡಬಾರದು. ಶರೀರದ ಸಹಜ ಪ್ರಕ್ರಿಯೆಗಳಿಗೆ ವ್ಯಾಯಾಮ, ಧ್ಯಾನ, ಧಾನ್ಯಗಳ ಬಳಕೆ ಮಾಡಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕಿ ಜಿ.ಬಿ.ಸುಧಾ ಅಧ್ಯಕ್ಷತೆ ವಹಿಸಿದ್ದರು. ಸಹಶಿಕ್ಷಕಿ ಮೆಹಬೂಬಿ, ಮಧುಶ್ರೀ, ಪವಿತ್ರಾ, ಪ್ರಸನ್ನಕುಮಾರ್, ಚಾಂದಿನಿ, ಶಿವಕುಮಾರ್, ಬಸವರಾಜ್, ಮೇಲ್ವಿಚಾರಕ ಮುಖೇಶ್, ಸೇವಾ ಪ್ರತಿನಿಧಿ ಶೈಲಾ, ರಶ್ಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net