

ಸೊರಬ: ಯಾವುದೇ ಸಂಘ-ಸಂಸ್ಥೆಗಳು ಸದೃಢವಾಗಿ ಬೆಳೆಯಲು ಸಂಘದ ಷೇರುದಾರರು ಸಂಪೂರ್ಣ ಸಹಕಾರ ಅತ್ಯಗತ್ಯ. ಉತ್ತಮರ ಸಹಕಾರ ದೊರೆತರೆ ಸಂಘವು ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದು ಧನಲಕ್ಷ್ಮೀ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕೆ.ಜಿ.ಲೋಲಾಕ್ಷಮ್ಮ ಹೇಳಿದರು.
ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅತ್ಯಂತ ಕಡಿಮೆ ಬಂಡವಾಳ ಹೂಡಿಕೆಯಿಂದ ಆರಂಭವಾದ ಸಂಘವು ಇಂದು ಸದೃಢವಾಗಿದೆ ಎಂದು ತಿಳಿಸಿದರು.
ಒಟ್ಟು 800 ಸದಸ್ಯರಿದ್ದು, 80 ಸಾವಿರ ರೂ. ಲಾಭ ಗಳಿಸಿದೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಸಂಘವು ಲಾಭದತ್ತ ಹೆಜ್ಜೆ ಇಟ್ಟಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸುವ ಮೂಲಕ ಮಹಿಳೆಯರನ್ನು ಸಶಕ್ತವಾಗಿಸುವ ಪಣ ತೊಡಲಾಗಿದೆ ಎಂದರು.
ಹಿರಿಯ ಸಹಕಾರಿಗಳಾದ ಚಿನ್ನಮ್ಮ, ನಾಗರತ್ನಮ್ಮ ಕುಬಟೂರು, ಪ್ರೇಮಾ ಶಿವಪ್ಪ ನೇರಲಗಿ, ಪ್ರತಿಭಾ ಮಂಜಪ್ಪ, ಮಂಜಮ್ಮ ಗುರುಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ಆಶಾ ರಂಗನಾಥ, ಶಾಂತಾ, ಅಂಬಿಕಾ, ಆಫ್ರೀನಾ, ಸರಸ್ವತಿ, ಗಿರಿಜಮ್ಮ, ಪೂಜಾ ದೇವರಾಜ, ಶರಾವತಿ, ಅನ್ನಪೂರ್ಣಾ ಇದ್ದರು.