

ಚನ್ನಮ್ಮನ ಕಿತ್ತೂರು: ಕ್ಷೇತ್ರದ ಶಾಲೆಗಳ ಅಭಿವೃದ್ಧಿಗೆ ಬೇಕಾದ ಸೌಲಭ್ಯ ಒದಗಿಸುವ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಮೂಲಕ ಉತ್ತಮ ಲಿತಾಂಶ ಸಾಧಿಸುವ ಗುರಿಗೆ ಎಲ್ಲ ಅಧಿಕಾರಿಗಳು ಹಾಗೂ ಪಾಲಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ತಾಲೂಕಿನ ಸಮೀಪದ ಅವರಾದಿ ಗ್ರಾಮದ ಪ್ರೌಢಶಾಲೆ ಉದ್ಘಾಟನೆ ಹಾಗೂ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ಸರ್ಕಾರಿ ಶಾಲೆ ನಮ್ಮೆಲ್ಲರ ಆಸ್ತಿ. ಅವುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಸರ್ಕಾರ ಪ್ರತಿಯೊಂದು ಶಾಲೆಗಳಿಗೆ ಸವಲತ್ತು ಒದಗಿಸುತ್ತಿದ್ದು, ಉತ್ತಮ ಸಾಧನೆ ಮಾಡಬೇಕು. ಎಸ್ಎಸ್ಎಲ್ಸಿ ವಾರ್ಷಿಕ ಪರೀೆ ಲಿತಾಂಶದಲ್ಲಿ 134ನೇ ಸ್ಥಾನದಲ್ಲಿದ್ದ ಚನ್ನಮ್ಮನ ಕಿತ್ತೂರು ಈಗ 34ನೇ ಸ್ಥಾನದೊಂದಿಗೆ ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಹೊಸ ದಾಖಲೆ ಬರೆದಿದೆ. ಇನ್ನೂ ಹೆಚ್ಚಿನ ಸಾಧನೆ ಮಾಡಿ ಮಾದರಿ ತಾಲೂಕಾಗಿ ಮಾಡುವುದೇ ನನ್ನ ಗುರಿ ಎಂದು ಹೇಳಿದರು.
ಬಿಜೆಪಿ ಮುಖಂಡ ಬಸವರಾಜ ಪರವಣ್ಣವರ ಮಾತನಾಡಿ, ನಮ್ಮ ಗ್ರಾಮಕ್ಕೆ ಬಹುದಿನಗಳಿಂದ ಪ್ರೌಢಶಾಲೆ ಬೇಕಾಗಿತ್ತು. ಆದರೆ, ಇಲ್ಲಿಯವರೆಗೂ ಸಿಕ್ಕಿರಲಿಲ್ಲ. ಇದೀಗ ಊರಿಗೆ ಶಾಸಕ ಬಾಬಾಸಾಹೇಬ ಪಾಟೀಲ ಪ್ರೌಢಶಾಲೆ ಸೌಲಭ್ಯ ಕಲ್ಪಿಸಿದ್ದು ಶ್ಲಾನೀಯ ಎಂದರು. ಜಿಲ್ಲಾ ಡಿಡಿಪಿಐ ಲೀಲಾವತಿ ಹಿರೇಮಠ ಮಾತನಾಡಿ, ಶಾಸಕರ ಶೈಕ್ಷಣಿಕ ಇಚ್ಛಾಶಕ್ತಿಯಿಂದ ಕಿತ್ತೂರು ತಾಲೂಕು ಎಸ್ಎಸ್ಎಲ್ಸಿ ಪರೀೆಯಲ್ಲಿ ಬೆಳಗಾವಿ ಜಿಲ್ಲೆಗೆ ಪ್ರಥಮ ಒಳ್ಳೆಯ ಬೆಳವಣಿಗೆ ಎಂದರು.
ಶಾಲಾ ಪ್ರಾರಂಭೋತ್ಸವಕ್ಕೆ ಎತ್ತಿನ ಬಂಡಿ ಸಿಂಗರಿಸಿ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ರಾಜಗುರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಗುರು ಮಡಿವಾಳೇಶ್ವರ ಮಠದ ಪಂಚಾರಿ ಸ್ವಾಮೀಜಿ, ಅವರಾದಿ ಉಳವಯ್ಯ ಹಿರೇಮಠ ಸ್ವಾಮೀಜಿ ಆಶೀರ್ವಚನ ಮಾಡಿದರು. ತಹಸೀಲ್ದಾರ್ ರವೀಂದ್ರ ಹಾದಿಮನಿ, ೇತ್ರ ಶಿಣಾಧಿಕಾರಿ ಸಿ.ವೆ. ತುಬಾಕದ, ಸಿಪಿಐ ಶಿವಾನಂದ ಗುಡುಗನಟ್ಟಿ, ತಾಪಂ ಇಒ ಮಹೇಶ ಹುಲಿ, ದೇವರಾಜ ಪಾಟೀಲ, ಪಿಡಿಒ ಶಿವಲಿಂಗಯ್ಯ ಗುರುವಯ್ಯನವರ, ಬಸಣ್ಣಗೌಡ ಪಾಟೀಲ, ಮಂಜುನಾಥ ಬಡಿಗೇರ, ಸೋಮಪ್ಪ ಪುರದ, ಗಿರಿಯಪ್ಪ ಪರವಣ್ಣವರ, ದೇವೇಂದ್ರಪ್ಪ ಬಡಿಗೇರ, ಬಸವರಾಜ ಪಾಟೀಲ ಇತರರಿದ್ದರು.