ನಿರಂತರ ಅಧ್ಯಯನದಿಂದ ಗುರಿ ನಿಶ್ಚಿತ

h29=adarsh college
Published on

ಹುಬ್ಬಳ್ಳಿ: ಇಲ್ಲಿಯ ಲಿಂಗರಾಜ ನಗರದ ಆದರ್ಶ ಪದವಿಪೂರ್ವ ವಿಜ್ಞಾನ ಕಾಲೇಜ್‌ನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶನಿವಾರ ಏರ್ಪಡಿಸಲಾಗಿತ್ತು.

2024-25ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಪಿಯುಸಿ ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಅತ್ಯುತ್ತಮ ಅಂಕ ಗಳಿಸಿದ 21 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ರಾಜ್ಯಕ್ಕೆ ಏಳನೇ ರ‌್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ರೀನಾ ರಾಹುತ್ ವಿದ್ಯಾರ್ಥಿನಿಗೆ 30 ಸಾವಿರ ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಶರಣಪ್ಪ ಕೊಟಗಿ ಮಾತನಾಡಿ, ಶಿಕ್ಷಕರ ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಸರಿಯಾಗಿ ಪಡೆಯಬೇಕು. ನಿರಂತರ ಅಧ್ಯಯನ ಮಾಡಿದರೆ ಹೆಚ್ಚು ಅಂಕ ಪಡೆದು ಉನ್ನತ ಗುರಿ ತಲುಪಬಹುದು ಎಂದರು.

ಸಂಸ್ಥೆಯ ಅಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಘಟ್ಟವು ಅತ್ಯುನ್ನತವಾದದು. ಇದು ನಿಮ್ಮ ಮುಂದಿನ ಜೀವನವನ್ನು ನಿರ್ಮಿಸುತ್ತದೆ ಎಂದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಾವಕಾರ, ನಿರ್ದೇಶಕ ಪ್ರೊ.ಬಿ.ಸಿ. ಗೌಡರ ಮಾತನಾಡಿದರು.

ಸನ್ಮಾನಿತ ವಿದ್ಯಾರ್ಥಿಗಳು ಹಾಗೂ ಪಾಲಕರು, ಅನುಭವ ಹಂಚಿಕೊಂಡರು.

ಸಂಜನಾ ಅರ್ಕಸಾಲಿ ಭರತನಾಟ್ಯ ಪ್ರದರ್ಶಿಸಿದರು.

ನಿರ್ದೇಶಕ ಪ್ರೊ. ಡೇನಿಯಲ್ ಹೊಸಕೇರಿ ಉಪಸ್ಥಿತರಿದ್ದರು. ಪ್ರಾಚಾರ್ಯೆ ಸುನಂದಾ ಮೆಣಸಿನಕಾಯಿ ಸ್ವಾಗತಿಸಿದರು. ರಂಜಿತಾ ತುಕ್ಕಣ್ಣವರ ವಂದಿಸಿದರು. ಕವಿತಾ ಶೇಜವಾಡಕರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net