ವೀರಭದ್ರೇಶ್ವರ ಮಹಿಮೆ ಅಪಾರವಾದದ್ದು

VEERABRESHWAR SWAMI
Published on

ಬೆಳವಣಿಕಿ: ವೀರಭದ್ರ ದೇವರ ಮಹಿಮೆ ಅಪಾರವಾದದ್ದು. ಈಗಿನ ಕಾಲದಲ್ಲಿ ಒಂದು ಮೊಳೆ ಚುಚ್ಚಿದರೆ ಗಾಯವಾಗಿ ಕಾಲು ತೆಗೆಯುವ ಸಮಯ ಬರುತ್ತದೆ. ಆದರೆ, ಮೀಟರಗಟ್ಟಲೆ ಶಸ್ತ್ರಹಾಕಿ ತೆಗೆದರೂ ಕೇವಲ ವಿಭೂತಿಯನ್ನು ಹಚ್ಚಿ ಗುಣಪಡಿಸುವುದು ಪವಾಡವೇ ಆಗಿದೆ ಎಂದು ತೋರಗಲ್ಲ ಚನ್ನಮಲ್ಲಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತವೆ ಎಂದರು. ನೇತೃತ್ವ ವಹಿಸಿದ್ದ ಬಳಗಾನೂರ ಶಾಂತವೀರ ಶರಣರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದವರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಆನಂದಯ್ಯ ಬೋಪಳಾಪುರಮಠ, ರಾಜು ಹಿರೇಮಠ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಎಸ್.ವಿ. ಕುರಹಟ್ಟಿ, ಎಸ್.ಎಸ್. ಹಾಲಭಾವಿ ಹಾಗೂ ಮಲ್ಲಣ್ಣ ದಾದ್ಮಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net