

ಗೊಳಸಂಗಿ: ಗ್ರಾಮದಲ್ಲಿ ಗ್ರಾಮದೇವತೆ(ದ್ಯಾಮವ್ವತಾಯಿ) ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಅದ್ದೂರಿ ಚಾಲನೆ ದೊರೆಯಿತು.
ಬೆಳಗ್ಗೆ ಸಂಗಮೇಶ್ವರ ದೇವಸ್ಥಾನದಿಂದ ಮುತ್ತೈದೆಯರ ಕಳಸದಾರತಿ, ಡೊಳ್ಳು ವಾದನದೊಂದಿಗೆ ಗ್ರಾಮದೇವತೆ ಮೆರವಣಿಗೆ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಕೇಸರಿ ಬಣ್ಣದ ರಂಗಿನಾಟ ಗಮನ ಸೆಳೆಯಿತು.
ಬಳಿಕ ಗ್ರಾಮದೇವತೆ ದೇವಸ್ಥಾನದಲ್ಲಿ ಮೂತಿ ಪ್ರತಿಷ್ಠಾಪಿಸಲಾಯಿತು. ಬಳಿಕ ಗ್ರಾಮಸ್ಥರಿಂದ ದ್ಯಾಮವ್ವತಾಯಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಹಲವು ಹಾಲುಮತದ ಪೂಜಾರರಿಂದ ವೀರಗಾರಿಕೆಯ ಭವಿಷ್ಯದ ಹೇಳಿಕೆಗಳೂ ನಡೆದವು. ಗ್ರಾಪಂ ಅಧ್ಯಕ್ಷ ರಾವುತ ಸೀಮಿಕೇರಿ, ಪ್ರಮುಖರಾದ ಸಂಗಪ್ಪ ಕೋಲಾರ, ಅಯ್ಯಪ್ಪಗೌಡ ಪರಮಗೊಂಡ, ಸಹದೇವ ಪವಾರ, ಸುರೇಶ ಮಂಕಣಿ, ಹನುಮಂತ ಹುಡೇದಗಡ್ಡಿ, ಅಮರೇಶಗೌಡ ಪಾಟೀಲ, ಮಾರುತಿ ಚವಾಣ್, ಆದಪ್ಪ ಹೊಸಮನಿ, ಡಾ.ಎಂ.ಎಸ್. ಮೇಟಿ, ಶೇಕಪ್ಪ ಮಲಗೊಂಡ, ಭೀಮಶಿ ಜೈನಾಪುರ, ಅಶೋಕ ಚಲವಾದಿ ಇತರರಿದ್ದರು.