

ಹುಬ್ಬಳ್ಳಿ: ಇಲ್ಲಿಯ ಶಿರೂರ ಪಾರ್ಕ್ ಹತ್ತಿರದ ಡಾ. ವಿಜಯ ಥೀಟೆ ಹಾಲ್‌ನಲ್ಲಿ ಕನಕದಾಸರ ಜಯಂತಿ ನಿಮಿತ್ತ ಪಂ. ಸಂಜೀವ ಜೋಶಿ ಅವರಿಂದ ಎರಡು ತಾಸು ದಾಸವಾಣಿ ಕಾರ್ಯಕ್ರಮ ಶನಿವಾರ ಏರ್ಪಡಿಸಲಾಗಿತ್ತು.
ಹರಿದಾಸ ಚಿಂತಕ ವಿಷ್ಣುತೀರ್ಥ ಕಲ್ಲೂರಕರ ಪ್ರಾಸ್ತಾವಿಕವಾಗಿ ಮಾತನಾಡಿ, ಕನಕದಾಸರ ಮಹಿಮೆ, ಅವರ ಗ್ರಂಥಗಳ ಬಗ್ಗೆ ಹಾಗು ಅವರು ರಚಿಸಿದ ದಾಸ ಸಾಹಿತ್ಯ, ಕೀರ್ತನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಯತೀರ್ಥ ಪಂಚಮುಖಿ, ಸಂಜೀವ ಕಿತ್ತೂರ ತಬಲಾ, ಕಿರಣ ಅಯಾಚಿತ್ ಹಾರ್ಮೋನಿಯಂ, ಅಕ್ಷಯ ಭಟ್ ತಾಳ, ಲಕ್ಷ್ಮೀ ಪರ್ವತೀಕರ ತಂಬೂರು ಸಾಥ್ ನೀಡಿದರು.
ಅಷ್ಟೋತ್ತರ ಮಂಡಳಿ ಅಧ್ಯಕ್ಷ ಆರ್.ಎಚ್. ಕುಲಕರ್ಣಿ, ವಿ. ಕೆ. ಕಲ್ಲೂರಕರ, ಬಾಲಚಂದ್ರ ಅಂಕೋಲ, ಆರ್.ಪಿ. ಕುಲಕರ್ಣಿ, ವಾದಿರಾಜ, ಗುರುರಾಜ ಮೊಕಾಶಿ, ಸುಮೇಧ ವಿಠ್ಠಲ, ಶ್ರೀಮಠದ ಧರ್ಮದರ್ಶಿ ಗೋವಿಂದಾಚಾರ್ಯ ಪಾಟೀಲ, ರಾಘವೇಂದ್ರ, ಸುನೀಲ ಕುಲಕರ್ಣಿ, ಸುಧೀರ ಜೋಶಿ, ಸಂಜೀವ ಶ್ರೀನಿವಾಸ, ಶ್ರೀನಿವಾಸರಾವ್, ಧಿರೇಂದ್ರ ಬಾಗಲಕೋಟೆ, ಕೃಷ್ಣ ಜೋಶಿ, ವಿಷ್ಣು ಸೊಲ್ಲಾಪುರ, ಇತರರು ಇದ್ದರು.
ಡಾ. ವಿಜಯ ಥೀಟೆ ಸ್ವಾಗತಿಸಿ, ಕಲಾವಿದರನ್ನು ಗೌರವಿಸಿದರು. ಅಚಿಂತ್ಯ ಥೀಟೆ ಪ್ರಾರ್ಥಿಸಿದರು.