ವಿಜೃಂಭಣೆಯ ಶ್ರೀ ತ್ರಿಪುರಾಂತಕಿ ದೇವಿ ರಥೋತ್ಸವ

kpp2
Published on

ಕೊಪ್ಪ: ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮಲಾಪುರ ಅಡಕೆಯ ಅದಿದೇವತೆ ಶ್ರೀ ತ್ರಿಪುರಾಂತಕಿ ಅಮ್ಮನವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ 4 ರಂದು ಶ್ರೀ ಸಿದ್ದಿವಿನಾಯಕ ಪೂಜೆ, 5ಕ್ಕೆ ಧ್ವಜಾರೋಹಣ, ವಸಂತಪೂಜೆ, ಸಂತರ್ಪಣೆ, ರಾತ್ರಿ ದೀಪಾರಾಧನೆ ನಡೆಯಿತು. 6 ರಂದು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು. ರಥಾರೋಹಣವಾಗುತ್ತಿದ್ದಂತೆ ರೈತರು ತಾವು ಬೆಳೆದ ಬೆಳೆ, ಆಹಾರ ಪದಾರ್ಥಗಳನ್ನು ರಥಕ್ಕೆ ಎರಚಿ, ಶ್ರದ್ಧಾ ಭಕ್ತಿಯಿಂದ ರಥ ಎಳೆದರು.

ಜಾತ್ರಾ ಮಹೋತ್ಸವಕ್ಕೆ ಬೊಮ್ಮಲಾಪುರದ ಗ್ರಾಮಸ್ಥರು ಸೇರಿದಂತೆ, ಭಂಡಿಗಡಿ, ಹಿರೇಕೊಡಿಗೆ, ಅದ್ದಡ, ಹರಿಹರಪುರ, ಬಸವಾನಿ, ಎನ್.ಆರ್.ಪುರ, ಶೃಂಗೇರಿ, ತೀರ್ಥಹಳ್ಳಿಯಿಂದ ಭಕ್ತರು ಪಾಲ್ಗೊಂಡರು. ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಚಂಡೆ, ಕೀಲುಕುದುರೆ ಹಾಗೂ ಕಲಾತಂಡಗಳು ರಥೋತ್ಸವಕ್ಕೆ ವಿಶೇಷ ಮೆರಗು ನೀಡಿದವು.

ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಎಸ್.ಎನ್.ರಾಮಸ್ವಾಮಿ, ದೇವಸ್ಥಾನ ಸಮಿತಿ ಸದಸ್ಯರಾದ ನಾಗರಾಜ್ ರಾವ್, ಕೆ.ಪಿ. ಮದನ್, ಹೆಚ್.ಎಂ.ಬಡಿಯಣ್ಣ, ಕೆ.ಕೆ.ದಿನಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net