ವಿಜೃಂಭಣೆಯ ಶ್ರೀ ಋಷ್ಯ ಶೃಂಗೇಶ್ವರ ಸ್ವಾಮಿ ರಥೋತ್ಸವ

6sri-2
Published on

ಶೃಂಗೇರಿ: ಮಳೆ ದೇವರು ಎಂದು ಪ್ರಖ್ಯಾತಗೊಂಡಿರುವ ಕಿಗ್ಗಾ ಶ್ರೀಋಷ್ಯಶೃಂಗೇಶ್ವರಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವ ಪ್ರಯುಕ್ತ ಹಲವು ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ಮಾ.31ರಂದು ಜಾತ್ರಾ ಧ್ವಜಾರೋಹಣ ನಡೆದಿದ್ದು , ಬೆಳಗ್ಗೆ ಸಾಲಂಕೃತಗೊಂಡ ರಥವನ್ನು ಕೊಂಚ ದೂರದ ತನಕ ಎಳೆಯಲಾಯಿತು.ರಥೋತ್ಸವಕ್ಕೆ ರಂಗವಲ್ಲಿಯ ಚಿತ್ತಾರಗಳು, ಛತ್ರಿ-ಚಾಮರಗಳು, ವಾದ್ಯಗೋಷ್ಠಿಗಳು, ತಳಿರು ತೋರಣಗಳು ಮೆರಗು ನೀಡಿದವು.

ಸಂಜೆ ಮುಖ್ಯಬೀದಿಯಲ್ಲಿ ಮತ್ತೆ ರಥವನ್ನು ಎಳೆದು ಉತ್ಸವಮೂರ್ತಿಯನ್ನು ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಹೊರ ಪ್ರಾಂತ್ಯಗಳಲ್ಲಿ ನೆಲೆಸಿರುವ ಭಕ್ತರು ಹಾಗೂ ಸ್ಥಳೀಯರು ಶ್ರದ್ಧಾಭಕ್ತಿಯಿಂದ ರಥೋತ್ಸವದಲ್ಲಿ ಭಾಗಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net