ವಿಜೃಂಭಣೆಯ ರೇವಣಸಿದ್ದೇಶ್ವರ, ಬಸವೇಶ್ವರ ಜಾತ್ರಾ ಮಹೋತ್ಸವ

ಸರಗೂರು ತಾಲೂಕಿನ ಹುಣಸಹಳ್ಳಿ ಗ್ರಾಮದಲ್ಲಿ ರೇವಣ ಸಿದ್ದೇಶ್ವರ, ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಸರಗೂರು ತಾಲೂಕಿನ ಹುಣಸಹಳ್ಳಿ ಗ್ರಾಮದಲ್ಲಿ ರೇವಣ ಸಿದ್ದೇಶ್ವರ, ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಸರಗೂರು: ತಾಲೂಕಿನ ಹುಣಸಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ರೇವಣಸಿದ್ದೇಶ್ವರ, ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಬಳಿಕ ದೇವಸ್ಥಾನದಲ್ಲಿ ಕೊನೆಗೊಂಡಿತು. ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನವನ್ನು ತಳಿರು -ತೋರಣ ಕಟ್ಟಿ ಸಿಂಗಾರಿಸಲಾಗಿತ್ತು. ವಾದ್ಯಗೋಷ್ಠಿ, ವೀರಗಾಸೆ ನೃತ್ಯ ಗಮನ ಸೆಳೆಯಿತು. ಸತ್ತಿಗೆಗಳು, ನಂದಿಧ್ವಜ ಕಂಬಗಳನ್ನು ಮೆರವಣಿಗೆ ಮಾಡಲಾಯಿತು.

ರಥೋತ್ಸವ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಸವ ಮೆರವಣಿಗೆಯಲ್ಲಿ ಸಾಗಿ ಬಂದಿದ್ದು ವಿಶೇಷವಾಗಿತ್ತು. ಹೂವು, ಬಾಳೆ ಹಣ್ಣುಗಳನ್ನು ನೀಡಿ ದೇವರಿಗೆ ನಮಿಸಿದರು. ಸರಗೂರು ಪೊಲೀಸರು ಮುನ್ನೆಚ್ಚರಿಕೆ ಕ್ರಮವಹಿಸಿದ್ದರು.

ಗುಡಿ ಗೌಡ ಚನ್ನಮಲ್ಲಪ್ಪ, ಶಶಿ ಪಾಟೀಲ್, ಪೂಜಾರಿ ಬಸವರಾಜು, ಚಿಕ್ಕ ಯಜಮಾನ ಬಸವಯ್ಯ, ಚಲುವರಾಜು, ಬೆಳ್ತೂರು ಸೊಸೈಟಿ ಉಪಾಧ್ಯಕ್ಷ ನಾಗರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ ಮನುಗನಹಳ್ಳಿ, ಚಲುವರಾಜು, ಶಾಂತಿಪುರ ನಿಂಗರಾಜು, ಕೆಂಪನಾಯಕ, ತಮ್ಮಯಪ್ಪ, ಗಣೇಶ್, ಮಹದೇವಸ್ವಾಮಿ, ಪ್ರದೀಪ್, ಮಹೇಶ್, ಚಂದ್ರು, ಮಾದಪ್ಪ, ನಟೇಶ್, ಬಸವಣ್ಣ, ದೇವೆಂದ್ರ, ವೆಂಕಟೇಶ, ಕೃಷ್ಣ, ಚಿನ್ನಯ್ಯ, ಸ್ವಾಮಿ, ಮಲ್ಲಪ್ಪ, ಕುಮಾರ್, ಮಂಜು, ಪ್ರಭು, ಮಲ್ಲಿಕಾರ್ಜುನಪ್ಪ, ಮಹದೇವಪ್ಪ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net