

ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಇಡಗುಂಜಿಯ ಶ್ರೀ ವಿನಾಯಕ ದೇವರ ಮಹಾರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದ ವಿವಿಧ ಧಾರ್ವಿುಕ ಕಾರ್ಯಕ್ರಮ ನಡೆದವು.
ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಅಭಿಷೇಕ, ಆರತಿ, ಹಣ್ಣು ಕಾಯಿ, ಪಂಚಕಜ್ಜಾಯ ಸೇರಿ ವಿವಿಧ ಸೇವೆಗಳನ್ನು ಭಕ್ತರು ಸಲ್ಲಿಸಿದರು. ಇಡಗುಂಜಿಯ ಸುತ್ತಮುತ್ತಲಿನ ರೈತರು ಬೆಳೆದ ಅಡಕೆ ಗೊನೆ, ತೆಂಗಿನ ಕಾಯಿ, ಬಾಳೆ ಗೊನೆಗಳನ್ನು ರಥಕ್ಕೆ ಕಟ್ಟಿ ಉತ್ತಮ ಫಸಲಿಗಾಗಿ ಬೇಡಿಕೊಂಡರು. ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಯಘೊಷದೊಂದಿಗೆ ರಥವನ್ನು ಎಳೆಯಲಾಯಿತು.