ಜೂ.11ರವೆರೆಗೆ ಶ್ರೀಪಾದರಾಜರ ವೈಭವೋತ್ಸವ

18 MBL 3
Published on

ಮುಳಬಾಗಿಲು: ನಗರದ ಹೊರವಲಯದ ನರಸಿಂಹತೀರ್ಥದ ಶ್ರೀ ಪಾದರಾಜರ ಮಠದಲ್ಲಿ ಮೇ 10ರಿಂದ ಆರಂಭವಾಗಿರುವ ಶ್ರೀ ಶ್ರೀಪಾದರಾಜರ ವೈಭವೋತ್ಸವ ಜೂ.11 ರಂದು ಸಂಪನ್ನಗೊಳ್ಳಲಿದೆ.

ಶ್ರೀ ಶ್ರೀ ಪಾದರಾಜರ ಆರಾಧನೆ ಪ್ರಯುಕ್ತ ನಿತ್ಯ ಜ್ಞಾನ ಯಜ್ಞ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭೂತಾಗ್ನಿ - ಪವಮಾನ ಹೋಮ, ಜ್ಞಾನಾಗ್ನಿ, ಶಾಸ್ತ್ರ ಪ್ರವಚನ, ಶಾಸ್ತ್ರ ಪಾಠ, ಬ್ರಹ್ಮಾಗ್ನಿ, ಬ್ರಾಹ್ಮಣರಿಗೆ ಅಲಂಕಾರ, ನಾರದಾಗ್ನಿ ದಾಸರ ಕೃತಿಗಳ ಸಂಕೀರ್ತನೆಗಳು ನಡೆಯುತ್ತಿವೆ. ಒಂದು ತಿಂಗಳವರೆಗೆ ನಡೆಯುವ ಈ ಜ್ಞಾನ ಯಜ್ಞದಲ್ಲಿ ಭಾಗವಹಿಸುತ್ತಿರುವ ಮದ್ವ ಮಠಾಧೀಶರಿಗೆ ನಿಮಂತ್ರಣ ಪೂರ್ವಕ ಸತ್ಕಾರ ಮತ್ತು ಸಂಸ್ಥಾನ ಪೂಜೆಗಳು, ಶ್ರೀಪಾದರಾಜ ಮಠದ ಪೀಠಾಧ್ಯಕ್ಷ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳ ನೇತೃತ್ವದಲ್ಲಿ ನಿತ್ಯ ನಡೆಯುತ್ತಿದೆ.

ಅಧ್ಯಾತ್ಮ ಮಾಲಾ, ಶ್ರೀ ಲಕ್ಷಿ$್ಮ ನರಸಿಂಹ ಪ್ರಾದು ಭಾರ್ಗವ ದಂಡಕ, ಧ್ರುವ ಚರಿತ್ರೆ, ಸಮಾಖ್ಯಾ ಪ್ರಮಾಣ ಸಹಿತ ಮಧ್ವನಾಮ, ಶ್ರೀ ಶ್ರೀಪಾದರಾಜರು ರಚಿಸಿದ ಗೋಪಿ ಗೀತೆ, ಕೃತಿಗಳಲ್ಲಿನ ವೈರಾಗ್ಯ, ಸೋತ್ರ ಸಂಕಲನ, ಭ್ರಮರಗೀತೆ, ಉಗಾಭೋಗ, ಶ್ರೀಪಾದರಾಜರ ಮತ್ತು ಶ್ರೀ ವ್ಯಾಸರಾಜರ ಗುರು ಶಿಷ್ಯ ಸಂಬಂಧ ವಿಷಯಗಳ ಕುರಿತಂತೆ ಮಧ್ವ ಪಂಡಿತರಿಂದ ಪ್ರವಚನಮಾಲಿಕೆ ಕಾರ್ಯಕ್ರಮಗಳು ನಡೆಯಲಿವೆ.

ಜೂ.9 ರಿಂದ ವಾರ್ಷಿಕ ಆರಾಧನೆ

ಜೂನ್​ 9 ರಿಂದ 11 ರವರಿಗೆ 3 ದಿನಗಳಕಾಲ ಶ್ರೀ ಶ್ರೀ ಪಾದರಾಜರ ವಾರ್ಷಿಕ ಆರಾಧನೆ ಮಹೋತ್ಸವ ಮತ್ತು ಶ್ರೀ ಯೋಗ ನರಸಿಂಹದೇವರ ರಥೋತ್ಸವ ನಡೆಯಲಿದೆ. ಮೇ-10 ರಂದು ಶ್ರೀ ಶ್ರೀಪಾದರಾಜರ ವೈಭವೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದಂಗಳವರು, ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರು ಜೂ.- 9 ರಂದು ಆರಾಧನೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net