

ಅರಕಲಗೂಡು : ಪಟ್ಟಣದ ಕುರುಬರ ಬೀದಿಯಲ್ಲಿ ಶುಕ್ರವಾರ ಬಂಡಿಹಬ್ಬದ ಅಂಗವಾಗಿ ಗ್ರಾಮ ದೇವತೆ ಶ್ರೀ ದೊಡ್ಡಮ್ಮ ದೇವಿ ಹಾಗೂ ಶ್ರೀ ಶಾಂತವೀರಮ್ಮ ದೇವರ ಉತ್ಸವ ಸಂಭ್ರಮದಿಂದ ಜರುಗಿತು. ಐದು ವರ್ಷಗಳಿಗೊಮ್ಮೆ ಆಚರಿಸುವ ಬಡ್ಡಿ ಹಬ್ಬದ ಉತ್ಸವದಲ್ಲಿ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಚಿಲುಮೆ ಮಠದಿಂದ ಭಕ್ತರು ಶ್ರೀ ದೊಡ್ಡಮ್ಮ ದೇವಿ ಹಾಗೂ ಶ್ರೀ ಶಾಂತವೀರಮ್ಮ ದೇವರ ಉತ್ಸವ ಮೂರ್ತಿಯನ್ನು ಭಕ್ತರು ಹೊತ್ತು ಸಾಗಿದರು. ಭಕ್ತರು ಉತ್ಸವ ದೇವತೆಗಳಿಗೆ ಪೂಜೆ ಸಲ್ಲಿಸಿ ಭಕ್ತಿಭಾವ ಸಮರ್ಪಿಸಿದರು. ಬಳಿಕ ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ವಿಧಾನಗಳನ್ನು ಪೂರೈಸಲಾಯಿತು. ರಾತ್ರಿ ಕೊಂಡೋತ್ಸವ ಸೇವೆ ಸಲ್ಲಿಸಲಾಯಿತು. ಭಕ್ತರು ಅಲಂಕೃತ ಬಂಡಿಗಳಿಗೆ ಪೂಜೆ ಸಲ್ಲಿಸಿ ಕೆಂಡ ಹಾಯ್ದು ಪ್ರಾರ್ಥನೆ ಸಲ್ಲಿಸಿದರು.