

ಎನ್.ಆರ್.ಪುರ: ಹೊನ್ನೇಕುಡಿಗೆ ಗ್ರಾಪಂ ವ್ಯಾಪ್ತಿಯ ಹಂದೂರು ಗ್ರಾಮದ ಚಿಕ್ಕಂದೂರು ಶ್ರೀ ವೀರಭದ್ರೇಶ್ವರ ಹಾಗೂ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಜಾತ್ರೋತ್ಸವ ಅಂಗವಾಗಿ ಶ್ರೀದುರ್ಗಾಪರಮೇಶ್ವರಿ ಮತ್ತು ಶ್ರೀನಾಗದೇವರ ಪ್ರತಿಷ್ಠಾಪನೆ, ಪ್ರಾಣ ಪ್ರತಿಷ್ಠಾಪನೆ, ಕಲಶಾಭಿಷೇಕ, ಹೋಮ, ಅಧಿವಾಸ ಹೋಮ,ಮಹಾ ಮಂಗಳಾರತಿ, ಮಹಾ ಪೂರ್ಣಾಹುತಿ, ವಿಶೇಷ ಅಂಲಕಾರದೊಂದಿಗೆ ಮಂಗಳದ್ರವ್ಯ ಸೇವೆ, ಪ್ರಸಾದ ವಿನಯೋಗ ನಡೆಯಿತು. ಸಂಜೆ 5.00 ಗಂಟೆಗೆ ಶ್ರೀ ವೀರಭದ್ರಸ್ವಾಮಿ ಮತ್ತು ಪರಿವಾರ ದೇವರುಗಳ ಕಳಶ ಪ್ರತಿಷ್ಠಾಪನಾ ಪೂರ್ವಕ ಕಲ್ಪೋಕ್ತ ಪೂಜೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಜಾತ್ರಾ ಮಹೋತ್ಸವದ ಕೊನೆ ದಿನ ಶ್ರೀವೀರಭದ್ರ ಸ್ವಾಮಿಗೆ ಕಲಾ ಸಾನ್ನಿಧ್ಯ ಹೋಮ, ಬಿಲ್ವಾರ್ಚನೆ, ಭಸ್ಮಾರ್ಚನೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಪ್ರಧಾನ ಕಂಬಾಭಿಷೇಕ, ಮಹಾ ಪೂಜೆ, ನೈವೇದ್ಯೆ ಸೇವೆ, ಸಾನ್ನಿಧ್ಯ ಸೇವೆ, ಕ್ಷೇತ್ರಪಾಲ ಬಲಿ, ಮಹಾ ಮಂಗಳಾರತಿ ನಡೆಯಲಿದೆ. ಶನಿವಾರ ಬೆಳಗ್ಗೆ ಶ್ರೀ ವೀಭದ್ರ ಸ್ವಾಮಿಗೆ ಕೆಂಡಾರ್ಚನೆ, 6.30 ಕ್ಕೆ ಶ್ರೀವೀರಭದ್ರ ಸ್ವಾಮಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ಸಮಿತಿ ಪದಾಧಿಕಾರಿಗಳು ಹಾಗೂ ಸರ್ವ ಭಕ್ತಾಧಿಗಳು ಹಾಜರಿದ್ದರು.