ವೈಭವದ ಅಂಬಾಭವಾನಿ ಜಯಂತಿ

The glorious Amba Bhavani Jayanti
ತಾಳಿಕೋಟೆಯಲ್ಲಿ ರಜಪೂತ ಸಮಾಜ ಬಾಂಧವರ ವತಿಯಿಂದ ಅಂಬಾಭವಾನಿ ದೇವಿಯ ಜಯಂತಿ ಅಂಗವಾಗಿ ಪಲ್ಲಕ್ಕ್ಕಿ ಉತ್ಸವ ನಡೆಯಿತು.
Published on

ತಾಳಿಕೋಟೆ: ಪಟ್ಟಣದ ರಜಪೂತ ಸಮಾಜದವರ ಕುಲದೇವತೆ ಅಂಬಾಭವಾನಿ ದೇವಿಯ ಜಯಂತಿ ಸೋಮವಾರ ಸಂಭ್ರಮದಿಂದ ನಡೆಯಿತು.

ರಜಪೂತಗಲ್ಲಿಯ ಅಂಬಾಭವಾನಿ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಅಲಂಕಾರ, ಮಹಾಮಂಗಳಾರತಿ ಕಾರ್ಯಕ್ರಮವನ್ನು ಅರ್ಚಕ ಭೀಮಾಶಂಕರ ಜೋಶಿ ನಡೆಸಿಕೊಟ್ಟರು. ನಂತರ ದೇವಸ್ಥಾನದಲ್ಲಿ ಶ್ರೀರಾಮಚಂದ್ರ ಪ್ರಭು ಹಾಗೂ ಸೀತಾದೇವಿಯ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಭೀಮಾಶಂಕರ ಜೋಶಿ ಹಾಗೂ ವೆಂಕಟೇಶ್ವರ ಗ್ರಾಮಪುರೋಹಿತ ಸಂಗಡಿಗರ ನೇತೃತ್ವದಲ್ಲಿ ನಡೆಯಿತು.

ಬಳಿಕ ಪಲ್ಲಕಿ ಉತ್ಸವ ಹಾಗೂ ಸುಮಂಗಲೆಯರಿಂದ ಕುಂಭಮೇಳ ಪಟ್ಟಣದ ಭಾವಸಾರ ಸಮಾಜದ ಅಂಬಾಭವಾನಿ ಮಂದಿರದವರೆಗೆ ತೆರಳಿ ಅಲ್ಲಿಂದ ಮರಳಿ ರಜಪೂತ ಗಲ್ಲಿಯ ದೇವಸ್ಥಾನಕ್ಕೆ ಆಗಮಿಸಿತು.

ಸಮಾಜದ ಅಧ್ಯಕ್ಷ ಹರೀಶಸಿಂಗ್ ಮೂಲಿಮನಿ, ಉಪಾಧ್ಯಕ್ಷ ರಥನಸಿಂಗ್ ಕೊಕಟನೂರ, ಗೋವಿಂದಸಿಂಗ್ ಮೂಲಿಮನಿ, ವಿಠ್ಠಲಸಿಂಗ್ ಹಜೇರಿ (ಬೇಕಿನಾಳ), ವಿಜಯಸಿಂಗ್ ಹಜೇರಿ, ಸುರೇಶ ಹಜೇರಿ, ಪ್ರಕಾಶ ಹಜೇರಿ, ಗೋವಿಂದಸಿಂಗ್ ಗೌಡಗೇರಿ, ಭರತಸಿಂಗ್ ಹಜೇರಿ, ರಘುರಾಮಸಿಂಗ್ ಹಜೇರಿ, ಉಮರಸಿಂಗ್ ಹಜೇರಿ, ಗಂಗಾರಾಮ ಕೊಕಟನೂರ, ಅಲೋಕ ಗೌಡಗೇರಿ, ಸುನಿತ ವಿಜಾಪುರ, ರಾಹುಲ್ ಮೂಲಿಮನಿ, ಅಮಿತಸಿಂಗ್ ಮನಗೂಳಿ, ಬಾಬು ಹಜೇರಿ, ಪ್ರಹ್ಲಾದ ಹಜೇರಿ, ಜೈಸಿಂಗ್ ಮೂಲಿಮನಿ, ಆನಂದ ಹಜೇರಿ, ಗೋವಿಂದಸಿಂಗ್ ಹಜೇರಿ(ಪಿಂಟು), ಎಸ್.ಎ.ಹಜೇರಿ, ಕೆ.ಆರ್.ಹಜೇರಿ, ರಮೇಶ ಗೌಡಗೇರಿ, ಮಾನಸಿಂಗ್ ಕೊಕಟನೂರ ಉಪಸ್ಥಿತರಿದ್ದರು.

ಶ್ರೀರಾಮ ಹಾಗೂ ಸೀತಾದೇವಿ ಮೂರ್ತಿ ಪ್ರತಿಷ್ಠಾಪನೆಯ ಉಸ್ತುವಾರಿ ವಹಿಸಿದ್ದ ರಾಘವೇಂದ್ರ ಹಜೇರಿ ದಂಪತಿ ಹೋಮ-ಹವನ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದೇವಿಯ ಮಹಾಪ್ರಸಾದ ವ್ಯವಸ್ಥೆಯನ್ನು ಬಾಲಾಜಿ ಚಂದುಸಿಂಗ್ ಮೂಲಿಮನಿ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net