

ಮಡಿವಾಳ: ವಾಲ್ಮಿಕಿ ರಾಮಾಯಣ ದೇಶ-ಭಾಷೆಗೆ ಸೀಮಿತಗೊಳ್ಳದೆ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ ಎಂದು ಗ್ರಾಪಂ ಅಧ್ಯಕ್ಷೆ ಅಶ್ವತ್ಥಮ್ಮ ರಾಮಯ್ಯ ತಿಳಿಸಿದರು.
ಮಾಲೂರು ತಾಲೂಕಿನ ತೊರ‌್ನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿ, ಮನುಷ್ಯ, ಮನುಷ್ಯನಾಗಿ ಬದುಕಲು ಮಹರ್ಷಿ ವಾಲ್ಮೀಕಿಯವರ ಆಚಾರ-ವಿಚಾರಗಳನ್ನು ಅನುಸರಿಸಬೇಕು. ಇಂದಿನ ಯುವ ಸಮುದಾಯ ವಾಲ್ಮೀಕಿಯವರ ತತ್ವಾದರ್ಶಗಳನ್ನು ಅನುಸರಿಸುವುದರ ಮೂಲಕ ಸಧೃಡ ಸಮಾಜ, ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ವಾಲ್ಮೀಕಿ ಮಹರ್ಷಿಗಳು ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ಪಿಡಿಒ ಸಿ.ಆರ್.ಗೌಡ ಹೇಳಿದರು.
ವಾಲ್ಮೀಕಿ ಮಹರ್ಷಿಗಳ ಹೂವಿನ ಪಲ್ಲಕ್ಕಿ ನೋಡುಗರ ಕಣ್ಮನ ಸೆಳೆಯಿತು.
ಪಂಚಾಯಿತಿಯ ಸದಸ್ಯರಾದ ಎ.ಮಂಜುನಾಥ್, ತಿಮ್ಮರಾಯಪ್ಪ, ನಾಗವೇಣಿ, ಟಿ.ವಿ.ನಾರಾಯಣಸ್ವಾಮಿ, ರೂಪಾ, ಸಂತೋಷ್, ವನಜಾಕ್ಷಿ, ಬಿಲ್‌ಕಲೆಕ್ಟರ್ ನಾಗರಾಜ್, ತಿರುಮಲೇಶ್, ಶಂಕರ್, ಇತರರು ಇದ್ದರು.